ಈರುಳ್ಳಿ, ಟೊಮ್ಯಾಟೊ ಬೆಲೆ ಯಾಕೆ ಹೆಚ್ಚೆಂದರೆ...

Update: 2017-11-08 18:51 GMT

ಮಾನ್ಯರೆ,

ಕೇಂದ್ರ ಸಕಾರಕಾರದ ಕೃಷಿ ಇಲಾಖೆ ಪ್ರಕಾರ ಈ ವರ್ಷ ಈರುಳ್ಳಿ ಮತ್ತು ಟೊಮ್ಯಾಟೊ ಬೆಳೆ ಚೆನ್ನಾಗಿ ಬಂದಿದ್ದು, ಇವೆರಡೂ ಮಾರುಕಟ್ಟೆಯಲ್ಲಿ ಕೆಜಿಗೆ ಹೆಚ್ಚೆಂದರೆ ರೂ.25ರ ಒಳಗೆ ಮಾರಾಟವಾಗಬೇಕಿತ್ತು.ಆದರೆ ಈಗಲೂ ಕರ್ನಾಟಕದಲ್ಲಿ ಈರುಳ್ಳಿ ಮತ್ತು ಟೊಮ್ಯಾಟೊ ಬೆಲೆ ಯಾಕೆ ರೂ.50 ದಾಟಿದೆ? ಆದರೆ ಗುಜರಾತಿನಲ್ಲಿ ಯಾಕೆ ಈರುಳ್ಳಿ ಮತ್ತು ಟೊಮ್ಯಾಟೊ ಬೆಲೆ ಕೇವಲ 10ರಿಂದ 15 ರೂಪಾಯಿ ಮಾತ್ರವಿದೆ? ಗುಜರಾತಿನಲ್ಲಿ ವ್ಯಾಪಾರಿಗಳು ಯಾಕೆ ಇಷ್ಟು ನಷ್ಟ ಮಾಡಿಕೊಂಡು ಈರುಳ್ಳಿ, ಟೊಮ್ಯಾಟೊ ಮಾರುತ್ತಿದ್ದಾರೆ? ಈ ಪ್ರಶ್ನೆಗೆ ಉತ್ತರ ತುಂಬಾ ಸುಲಭ. ಅಸಲಿಗಿಂತ ಕಡಿಮೆ ಬೆಲೆಯಲ್ಲಿ ಗುಜರಾತಿನಲ್ಲಿ ಈರುಳ್ಳಿ ಮಾರಿ ಆಗುತ್ತಿರುವ ನಷ್ಟವನ್ನು ಈ ವ್ಯಾಪಾರಿಗಳು ಇತರ ರಾಜ್ಯದಲ್ಲಿ ತುಂಬಾ ಹೆಚ್ಚು ಬೆಲೆಗೆ ಮಾರಿ ತುಂಬಿಸಿಕೊಳ್ಳುತ್ತಿದ್ದಾರೆ.
 
ಈರುಳ್ಳಿ ಬೆಳೆಯುವ ಪ್ರಮುಖ ರಾಜ್ಯಗಳಾದ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿ ಕೃಷಿ ಮಾರುಕಟ್ಟೆ ಮಾರ್ವಾಡಿ ಮತ್ತು ಬನಿಯಾಗಳ ಮುಷ್ಟಿಯಲ್ಲಿ ಇದೆ. ಇವರೆಲ್ಲಾ ಮೋದಿಯವರ ಹಿಂಬಾಲಕರು. ಹಿಂದಿನ ಮೂರೂವರೆ ವರ್ಷಗಳಲ್ಲಿ ಹಲವು ಬಾರಿ ಕೃತ್ರಿಮ ಅಭಾವ ಸೃಷ್ಟಿಸಿ ಈರುಳ್ಳಿಯ ಬೆಲೆ ಕೆಜಿಗೆ ರೂ.100 ದಾಟಲು ಅನುವು ಮಾಡಿ ಕೊಟ್ಟಿದ್ದು ಕೇಂದ್ರದ ಬಿಜೆಪಿ ಸರಕಾರವೇ. 2014ರಲ್ಲಿ ಮೋದಿ ಅಧಿಕಾರಕ್ಕೆ ಬಂದ ಆರೇ ತಿಂಗಳೊಳಗೆ ಗುಜರಾತಿ ಅದಾನಿಯ ಆಮದು ಕಂಪೆನಿಯಾದ ಅದಾನಿ-ವಿಲ್ಮರ್ ಕಂಪೆನಿಯು ತೊಗರಿ ಬೇಳೆ ಮತ್ತು ಉದ್ದಿನ ಬೇಳೆಯನ್ನು ಆಫ್ರಿಕಾದಿಂದ ಕೆಜಿಗೆ ಕೇವಲ ರೂ. 40ರಲ್ಲಿ ಖರೀದಿಸಿ ಭಾರತದಲ್ಲಿ ಅದನ್ನು ಕೆಜಿಗೆ ರೂ.250ಕ್ಕೆ ಮಾರಿದ ದಿನಗಳನ್ನು ನೆನಪಿಸಿಕೊಳ್ಳಿ. ಇದರಲ್ಲಿ ಭಯಂಕರ ಲಾಭವಾಗಿದ್ದು ಗುಜರಾತಿ ಮಾರ್ವಾಡಿ ಮತ್ತು ಬನಿಯಾ ವ್ಯಾಪಾರಿಗಳಿಗೆ. ಮಹಾರಾಷ್ಟ್ರ ರಾಜ್ಯವು ಭಾರತದಲ್ಲಿ ಅತೀ ಹೆಚ್ಚು ಈರುಳ್ಳಿ ಬೆಳೆಯುವ ರಾಜ್ಯವಾದರೂ ಅಲ್ಲಿಯ ಕೃಷಿ ಮಾರುಕಟ್ಟೆ ಇರುವುದು ಕೇವಲ 4 ಮಾರ್ವಾಡಿ ಕುಟುಂಬದವರ ಕೈಯಲ್ಲಿ. ಹಾಗಾಗಿ ಈಗ ಗುಜರಾತ್ ಚುನಾವಣೆಯ ದೃಷ್ಟಿಯಿಂದ ಈರುಳ್ಳಿ ಮತ್ತು ಟೊಮ್ಯಾಟೊ ಅಗ್ಗ ದರಕ್ಕೆ ಮಾರಿ ಗುಜರಾತಿನ ಮತದಾರರು ಬಿಜೆಪಿಯಿಂದ ದೂರ ಸರಿಯದಂತೆ ಮಾಡಿ ಅಲ್ಲಿ ಆಗುತ್ತಿರುವ ನಷ್ಟವನ್ನು ಈ ವ್ಯಾಪಾರಿಗಳು ಇತರ ರಾಜ್ಯಗಳಲ್ಲಿ ತುಂಬಿಸಿಕೊಳ್ಳುತ್ತಿದ್ದಾರೆ ಅಷ್ಟೇ.

Writer - -ಅಭಿಷೇಕ್ ಪಡಿವಾಳ್, ಸುಳ್ಯ

contributor

Editor - -ಅಭಿಷೇಕ್ ಪಡಿವಾಳ್, ಸುಳ್ಯ

contributor

Similar News