×
Ad

ನ.12 ರಂದು ಮಾಳಿ ಸಮುದಾಯದ ವಧು-ವರರ ಸಮಾವೇಶ

Update: 2017-11-09 20:05 IST

ಬೆಂಗಳೂರು, ನ.9: ಅಖಿಲ ಕರ್ನಾಟಕ ಮಾಳಿ(ಮಾಲಗಾರ) ಸಮುದಾಯದಿಂದ ನ.12 ರಂದು ಗಾಂಧಿ ಭವನದಲ್ಲಿ ರಾಜ್ಯಮಟ್ಟದ ವಧುವರರ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಕುಪೇಂದ್ರ ಎಸ್.ದೂಳೆ, ಈ ಸಮಾವೇಶದಲ್ಲಿ ಪಾಲ್ಗೊಳ್ಳುವವರು 500 ರೂ. ನೋಂದಣಿ ಶುಲ್ಕ ಪಾವತಿಸಿ ಆಸಕ್ತರು ಪಾಲ್ಗೊಳ್ಳಬಹುದು. ಸಮಾವೇಶದಲ್ಲಿ ವಧು-ವರರ ನಡುವೆ ಸಂಬಂಧ ಸಾಧ್ಯವಾಗದಿದ್ದಲ್ಲಿ ಕಾರ್ಯಕ್ರಮದ ನಂತರ ಪ್ರತ್ಯೇಕವಾಗಿ ಸಂಘದ ಮುಖಂಡರನ್ನು ಸಂಪರ್ಕಿಸಬಹುದಾಗಿದೆ ಎಂದರು.

ಸಮಾವೇಶದಲ್ಲಿ ಪಾಲ್ಗೊಳ್ಳುವ ಯುವಕ ಅಥವಾ ಯುವತಿಯರು ಒಂದು ಭಾವಚಿತ್ರ ಹಾಗೂ ಅಗತ್ಯ ದಾಖಲೆಗಳನ್ನು ತರಬೇಕು. ಸಂಘ ನೀಡುವ ಅರ್ಜಿಯಲ್ಲಿ ಮಾಹಿತಿ ಭರ್ತಿ ಮಾಡಿ ನೀಡಬೇಕು. ಅನಂತರ ಸದಸ್ಯರು ವಧುವರರನ್ನು ಸಂಪರ್ಕಿಸಿ ಮಾಹಿತಿ ನೀಡುತ್ತಾರೆ ಎಂದು ತಿಳಿಸಿದರು.

ಹೆಚ್ಚಿನ ಮಾಹಿತಿಗಾಗಿ 7899151515, 9845325260 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News