×
Ad

ಟಿಪ್ಪು ಜಯಂತಿ: ಮುಸ್ಲಿಂ ಮುಖಂಡರ ಶಾಂತಿ ಸೌಹಾರ್ದ ಸಭೆ

Update: 2017-11-09 22:19 IST

ಮದ್ದೂರು, ನ.9: ಟಿಪ್ಪು ಜಯಂತಿ ಆಚರಣೆ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಹಾಗು ಮುಸ್ಲಿಂ ಮುಖಂಡರ ಶಾಂತಿ ಸೌಹಾರ್ದ ಸಭೆ ಗುರುವಾರ ನಡೆಯಿತು. 

ಈ ವೇಳೆ ಬಿಜೆಪಿ ಮುಖಂಡ ಕದಲೂರು ಯೋಗಾನಂದ ಮಾತನಾಡಿ, ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಹಿಂದು ಧರ್ಮಿಯರನ್ನು ಕುರಿತು ಅವಹೇಳನಕಾರಿ ಬಾಷಣ ಮಾಡದಂತೆ ಕಾರ್ಯಕ್ರಮ ಆಯೋಜಕರಿಗೆ ತಾಕೀತು ಮಾಡಬೇಕೆಂದು ಒತ್ತಾಯಿಸಿದರು. 

ಡಿವೈಎಸ್ಪಿ ಮಲ್ಲಿಕ್ ಇದಕ್ಕೆ ಪ್ರತಿಕ್ರಿಯಿಸಿ, ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಮಾಡಲಾಗುವ ಭಾಷಣದ ಪ್ರತಿಯನ್ನು ಮೊದಲೆ ಇಲಾಖೆಗೆ ಸಲ್ಲಿಸುವಂತೆ ಸೂಚನೆ ನೀಡಿದ್ದೇವೆ. ಅದರಂತೆ ಅಂದು ನಡೆಯುವ ಭಾಷಣವನ್ನು ವೀಡಿಯೊ ಚಿತ್ರೀಕರಣ ಮಾಡಲಾಗುವುದು. ಯಾವುದೇ ಅವಹೇಳನಕಾರಿ ಹಾಗು ಗಲಭೆ ಪ್ರಚೋದಿತ ಭಾಷಣ ಮಾಡಿದರೆ ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.

ಶಾದಿ ಮಹಲ್ ಸಮಿತಿಯ ಉಪಾಧ್ಯಕ್ಷ ಫೈರೊಝ್ ಖಾನ್ ಮಾತನಾಡಿ, ನಾಳೆ ನಡೆಯುವ ಟಿಪ್ಪು ಜಯಂತಿ ವೇಳೆ ಮೂವರು ಹಿಂದು ಮುಖಂಡರನ್ನು ಸೇರಿದಂತೆ  ಆರು ಸಾಧಕರಿಗೆ ಸನ್ಮಾನ ಏರ್ಪಡಿಸಿದ್ದೇವೆ. ಯಾವುದೇ ಬಗೆಯ ಗೊಂದಲಗಳಿಗೆ ಅಶಾಂತಿಯಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಎಲ್ಲ ಮಸೀದಿ ಧ್ವನಿವರ್ಧಕಗಳ ಮೂಲಕ ಮುಸ್ಲಿಂ ಯುವಕರಿಗೆ ನಿರ್ದೇಶನ ನೀಡಲಾಗಿದೆ ಎಂದರು. 

ಸಭೆಯಲ್ಲಿ ಸಿಪಿಐ ಕೆ.ಪ್ರಭಾಕರ್, ಪಿಎಸ್‍ಐಗಳಾದ  ಕುಮಾರ್, ಯೋಗಾನಂದ, ಮಂಜೇಗೌಡ, ಸಂತೋಷ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಲಕ್ಷ್ಮಣ್‍ಕುಮಾರ್, ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ್, ವೀರಭದ್ರಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News