ವಿದ್ಯುತ್ ಪ್ರಾಧಿಕಾರದ ಸೇವೆಗೆ 5 ರೋಬೊಟ್ ಗಳ ನೇಮಕ

Update: 2017-11-11 16:19 GMT

ದುಬೈ, ನ. 11: ಐದು ರೋಬೊಟ್‌ಗಳನ್ನು ಸಿಬ್ಬಂದಿಯಾಗಿ ನೇಮಿಸಿರುವುದಾಗಿ ದುಬೈ ವಿದ್ಯುತ್ ಮತ್ತು ಜಲ ಪ್ರಾಧಿಕಾರ (ಡೇವ) ಘೋಷಿಸಿದೆ.

ಗ್ರಾಹಕರಿಗೆ ಸುಲಲಿತ ಹಾಗೂ ಗುಣಮಟ್ಟದ ಸೇವೆ ನೀಡುವ ತನ್ನ ನಿರಂತರ ಪ್ರಯತ್ನಗಳ ಮುಂದುವರಿದ ಭಾಗವಾಗಿ ನೂತನ ವ್ಯವಸ್ಥೆಯನ್ನು ಮಾಡಿರುವುದಾಗಿ ಅದು ಹೇಳಿದೆ.

‘ಡೇವ’ದ ‘ಫ್ಯೂಚರ್ ಸೆಂಟರ್ ಫಾರ್ ಕಸ್ಟಮರ್ ಹ್ಯಾಪಿನೆಸ್’ ದುಬೈನ ಪ್ರಥಮ ಸ್ಮಾರ್ಟ್ ಗ್ರಾಹಕ ನೆಮ್ಮದಿ ಕೇಂದ್ರವಾಗಿದೆ. ಇದು ಕೃತಕ ಬುದ್ಧಿಮತ್ತೆ (ಆರ್ಟಿಫೀಶಿಯಲ್ ಇಂಟಲಿಜನ್ಸ್) ಮತ್ತು ರೋಬೊಟಿಕ್ಸ್ ಆಧಾರದಲ್ಲಿ ನಡೆಯುತ್ತದೆ. ಇದು ಎಲ್ಲ ಗ್ರಾಹಕರಿಗೆ ಜಾಣ ಹಾಗು ಹೊಸತನದ ಸೇವೆಗಳನ್ನು ನೀಡುತ್ತದೆ ಎಂದು ಡೇವ ಹೇಳಿದೆ.

2018ರ ವೇಳೆಗೆ ಜನರು ಹೆಚ್ಚಾಗಿ ಸ್ಮಾರ್ಟ್ ಚಾನೆಲ್‌ಗಳನ್ನು ಬಳಸುವಂತೆ ಪ್ರೇರೇಪಿಸುವ ಹಾಗೂ ದುಬೈ ಸರಕಾರಿ ಕಚೇರಿಗಳಿಗೆ ಭೇಟಿ ನೀಡುವವರ ಸಂಖ್ಯೆಯನ್ನು 80 ಶೇಕಡದಷ್ಟು ಕಡಿಮೆ ಮಾಡುವ ಉದ್ದೇಶದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ‘ಡೇವ’ ಆಡಳಿತ ನಿರ್ದೇಶಕ ಮತ್ತು ಸಿಇಒ ಸಯೀದ್ ಮುಹಮ್ಮದ್ ತಾಯಿರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News