ಜಡೇಜ, ಅಶ್ವಿನ್ ದಾಳಿ ಎದುರಿಸಲು ಸೂಕ್ತ ತಯಾರಿ: ಕರಣರತ್ನೆ

Update: 2017-11-11 18:40 GMT

ಕೋಲ್ಕತಾ, ನ.11: ಭಾರತದ ಸ್ಪಿನ್ನರ್‌ಗಳಾದ ರವೀಂದ್ರ ಜಡೇಜ ಮತ್ತು ರವಿಚಂದ್ರನ್ ಅಶ್ವಿನ್ ಸ್ಪಿನ್ ದಾಳಿಯನ್ನು ಎದುರಿಸಲು ಚೆನ್ನಾಗಿ ಅಭ್ಯಾಸ ನಡೆಸಿರುವುದಾಗಿ ಶ್ರೀಲಂಕಾದ ಆರಂಭಿಕ ಎಡಗೈ ದಾಂಡಿಗ ದಿಮುತ್ ಕರುಣರತ್ನೆ ತಿಳಿಸಿದ್ದಾರೆ.

ಕರುಣರತ್ನೆ ಅವರು ಕಳೆದ ಸೆಪ್ಟಂಬರ್‌ನಲ್ಲಿ ತವರಿನಲ್ಲಿ ನಡೆದ ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ 285 ರನ್ ದಾಖಲಿಸಿದ್ದರು. ಪ್ರಥಮ ಟೆಸ್ಟ್‌ನ ಎರಡನೆ ಇನಿಂಗ್ಸ್‌ನಲ್ಲಿ 141 ರನ್ ಸೇರಿಸಿದ್ದರು.

 ಜಡೇಜ ಮತ್ತು ಅಶ್ವಿನ್ ವಿಕೆಟ್ ಪಡೆಯುವ ಹಸಿವನ್ನು ನೀಗಿಸಲು ಸರಣಿಯಲ್ಲಿ ಪ್ರಯತ್ನ ನಡೆಸಲಿದ್ದಾರೆ. ಆದರೆ ಅವರು ಅಂದುಕೊಂಡಂತೆ ಬೇಗನೇ ವಿಕೆಟ್ ಒಪ್ಪಿಸಲು ಸಿದ್ಧರಿಲ್ಲ ಎಂದು ಹೇಳಿದ್ದಾರೆ.

ಮಂಡಳಿ ಅಧ್ಯಕ್ಷರ ಇಲೆವೆನ್ ವಿರುದ್ಧದ ಎರಡು ದಿನಗಳ ಅಭ್ಯಾಸ ಪಂದ್ಯದ ಮೊದಲ ದಿನದ ಆಟ ಮುಕ್ತಾಯಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಕರುಣರತ್ನೆ ಅವರು ಕಳೆದ ತಿಂಗಳು ಪಾಕಿಸ್ತಾನ ವಿರುದ್ಧದ ಎರಡನೆ ಇನಿಂಗ್ಸ್‌ನಲ್ಲಿ ಜೀವನಶ್ರೇಷ್ಠ 196 ರನ್ ಗಳಿಸಿದ್ದರು. ಭಾರತದ ವಿರುದ್ಧದ ಕಳೆದ ಟೆಸ್ಟ್‌ನಲ್ಲಿ 141 ರನ್ ಗಳಿಸಿದ ಹಿನ್ನೆಲೆಯಲ್ಲಿ ಪಾಕ್ ವಿರುದ್ಧ ಬ್ಯಾಟಿಂಗ್‌ನಲ್ಲಿ ಸುಧಾರಣೆ ಕಾಣಲು ಸಾಧ್ಯವಾಯಿತು. ಮುಂಬರುವ ಟೆಸ್ಟ್ ಸರಣಿಯಲ್ಲಿ ಬ್ಯಾಟಿಂಗ್‌ನಲ್ಲಿ ಇನ್ನಷ್ಟು ಸುಧಾರಣೆ ಕಾಣಲು ಬಯಸಿರುವುದಾಗಿ ಹೇಳಿದ್ದಾರೆ.

ಭಾರತ ವಿರುದ್ಧದ ಕಳೆದ ಸರಣಿಯಲ್ಲಿ 29ರ ಹರೆಯದ ಕರುಣರತ್ನೆ ಅವರನ್ನು 2 ಬಾರಿ ಅಶ್ವಿನ್ ಮತ್ತು ಒಂದು ಬಾರಿ ಜಡೇಜ ಔಟ್ ಮಾಡಿದ್ದರು.

ಕರುಣರತ್ನೆ ಮಂಡಳಿ ಅಧ್ಯಕ್ಷರ ಇಲೆವೆನ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಅರ್ಧಶತಕ(50) ದಾಖಲಿಸಿದ್ದರು.

 ಮುಹಮ್ಮದ್ ಶಮಿ ಮತ್ತು ಉಮೇಶ್ ಯಾದವ್ ಅವರ ದಾಳಿಯನ್ನು ಕಳೆದ ಸರಣಿಯಲ್ಲಿ ಸಮಥರ್ವಾಗಿ ಎದುರಿಸಿರುವ ಅನುಭವ ಇದೆ ಎಂದು ಕರುಣರತ್ನೆ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News