ಪೈಪ್‌ಲೈನ್ ಸ್ಫೋಟಕ್ಕೆ ಇರಾನ್ ಪ್ರಾಯೋಜಿತ ಭಯೋತ್ಪಾದನೆ ಕಾರಣ: ಬಹರೈನ್ ಆರೋಪ

Update: 2017-11-12 14:26 GMT

ದುಬೈ, ನ. 12: ತನ್ನ ಪ್ರಧಾನ ತೈಲ ಪೈಪ್‌ಲೈನ್‌ನಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟಕ್ಕೆ ‘ಭಯೋತ್ಪಾದಕ’ ಬುಡಮೇಲು ಕೃತ್ಯ ಕಾರಣ ಎಂದು ಹೇಳಿರುವ ಬಹರೈನ್, ಈ ದಾಳಿಯ ಹಿಂದೆ ತನ್ನ ಬದ್ಧ ವೈರಿ ಇರಾನ್ ಇದೆ ಎಂದು ಆರೋಪಿಸಿದೆ.

ಬಹರೈನ್ ನಲ್ಲಿ ಹಲವಾರು ವರ್ಷಗಳಿಂದ ಪ್ರತಿಭಟನೆಗಳು ಮತ್ತು ಹಿಂಸಾಚಾರಗಳು ನಡೆಯುತ್ತಿವೆ. ಈ ಹಿಂಸಾಚಾರಗಳನ್ನು ಇರಾನ್‌ನ ಶಿಯಾ ಸರಕಾರ ಪ್ರಾಯೋಜಿಸುತ್ತಿದೆ ಎಂದು ಬಹರೈನ್ ಆರೋಪಿಸಿದೆ. ಆದರೆ, ಬಹರೈನ್ ನಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ತನ್ನ ಕೈವಾಡ ಇಲ್ಲ ಎಂಬುದಾಗಿ ಇರಾನ್ ಹೇಳುತ್ತಾ ಬಂದಿದೆ.

‘‘ಘಟನೆಯು ಬುಡಮೇಲು ಕೃತ್ಯವಾಗಿದೆ ಹಾಗೂ ದೇಶದ ಅತ್ಯುನ್ನತ ಹಿತಾಸಕ್ತಿ ಮತ್ತು ಸಾರ್ವಜನಿಕ ಸುರಕ್ಷತೆಗೆ ಹಾನಿಯುಂಟು ಮಾಡುವ ಉದ್ದೇಶದ ಭಯೋತ್ಪಾದಕ ಕೃತ್ಯವಾಗಿದೆ’’ ಎಂದು ಬಹರೈನ್ ಆಂತರಿಕ ಸಚಿವಾಲಯ ತನ್ನ ವೆಬ್‌ಸೈಟ್‌ನಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News