ಮಾದಕ ವಸ್ತು ಮಾರಾಟ: ಬಂಧನ
Update: 2017-11-12 22:28 IST
ಬೆಂಗಳೂರು, ನ.12: ಕಾನೂನು ಬಾಹಿರವಾಗಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಿ 1.100 ಕೆಜಿ ಗಾಂಜಾ ವಶಕ್ಕೆ ಪಡೆಯುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಅರ್ಕಾವತಿ ಲೇಔಟ್‌ನ ಮುನಿರಾಜ್(27), ಸುಲ್ತಾನ್‌ಪಾಳ್ಯ ಫಾರೂಕ್(30)ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಹೆಣ್ಣೂರಿನ ಕಲ್ಯಾಣನಗರದ ವೆಂಕಟೇಶ್ವರ ಗ್ಯಾರೇಜ್ ಮುಂಭಾಗ ಮಾದಕ ವಸ್ತು ಗಾಂಜಾವನ್ನು ತಮ್ಮ ವಶದಲ್ಲಿಟ್ಟುಕೊಂಡು ಪರಿಚಿತ ಗಿರಾಕಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಅಂಶ ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ.
ಪ್ರಕರಣ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.