ಅಧಿವೇಶನಕ್ಕೆ ಆಡಳಿತ ಯಂತ್ರ ಸ್ಥಗಿತ: ಹೈಕೋರ್ಟ್ ಗರಂ

Update: 2017-11-14 16:24 GMT

ಬೆಂಗಳೂರು, ನ.14: ಬೆಳಗಾವಿಯಲ್ಲಿ ಅಧಿವೇಶನ ನಡೆದರೆ ಇಲ್ಲಿ ಇಡೀ ಆಡಳಿತ ಯಂತ್ರ ಸ್ಥಗಿತಗೊಳ್ಳಬೇಕೆ ಎಂದು ಹೈಕೋರ್ಟ್ ಸರಕಾರವನ್ನು ಖಾರವಾಗಿ ಪ್ರಶ್ನಿಸಿದೆ.
ಅಬಕಾರಿ ವಿಷಯ ಕುರಿತಾದ ಅರ್ಜಿಯ ವಿಚಾರಣೆ ವೇಳೆ ಹಂಗಾಮಿ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಅವರಿದ್ದ ಪೀಠದ ಮುಂದೆ ಸರಕಾರಿ ವಕೀಲರು ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದೆ. ಅದಕ್ಕಾಗಿ ಎರಡು ವಾರ ಕಾಲಾವಕಾಶ ಬೇಕು ಎಂದು ಕೋರಿದರು.

ಆಗ ನ್ಯಾಯಮೂರ್ತಿಗಳು ಸರಕಾರ ಎಲ್ಲದಕ್ಕೂ ಅಧಿವೇಶನ, ಇಲ್ಲವೇ ಚುನಾವಣೆ ನೆಪ ಹೇಳುತ್ತದೆ. ಅಧಿವೇಶನ ಆದರೆ ಇಡೀ ಸರಕಾರ ನಿಂತು ಹೋಗಬೇಕೇ? ಆಡಳಿತಶಾಹಿ ಏನು ಮಾಡುತ್ತಿರುತ್ತದೆ? ಎಲ್ಲದಕ್ಕೂ ಕತೆ ಹೇಳುತ್ತೀರಿ. ಬೆಳಗಾವಿಯಲ್ಲಿ ಅಧಿವೇಶನ ನಡೆದರೆ ಇಲ್ಲಿ ಆಡಳಿತ ಏನು ಮಾಡುತ್ತದೆ. ಅದು ನಿಷ್ಕ್ರಿಯವಾಗುತ್ತದೆಯೇ ಎಂದು ಖಾರವಾಗಿ ಪ್ರಶ್ನಿಸಿದರು.

ಅಲ್ಲದೆ, ಎರಡಲ್ಲ, ಒಂದು ವಾರ ಮಾತ್ರ ನೀಡತ್ತೇನೆ ಎಂದು ನ್ಯಾಯಪೀಠ ಹೇಳಿತು. ಕೊಡಗು ಜಿಲ್ಲೆಯ ಕುಶಾಲನಗರಕ್ಕೆ ಮದ್ಯದ ಅಂಗಡಿ ಸ್ಥಳಾಂತರಕ್ಕೆ ಅವಕಾಶ ನೀಡಿರುವುದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News