ಈಶಾನ್ಯ ವಲಯದಲ್ಲಿ ಭೂಕಂಪನ: ಭಯಭೀತರಾದ ಜನತೆ

Update: 2017-11-18 05:08 GMT

ಹೊಸದಿಲ್ಲಿ, ನ.18: ಈಶಾನ್ಯ ಟಿಬೆಟ್‌ನಲ್ಲಿ ಶನಿವಾರ ಬೆಳಗ್ಗಿನ ಜಾವ 4.04ರ ಸುಮಾರಿಗೆ ಕೆಲವು ಸೆಕೆಂಡ್‌ಗಳ ಕಾಲ ಭೂಮಿ ನಡುಗಿದ್ದು ನಿದ್ದೆಮಂಪರಿನಲ್ಲಿದ್ದ ಈಶಾನ್ಯ ಭಾಗದ ಜನರು ಒಂದು ಕ್ಷಣ ಭಯಭೀತರಾಗಿದ್ದಾರೆ. ಭೂಕಂಪನ ಪ್ರಮಾಣ ರಿಕ್ಟರ್ ಮಾಪಕದಲ್ಲಿ 6.4ರಷ್ಟು ದಾಖಲಾಗಿತ್ತು.

ಭೂಕಂಪದಿಂದ ಈಶಾನ್ಯ ರಾಜ್ಯಗಳಲ್ಲಿ ಜೀವಹಾನಿ ಅಥವಾ ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ರಾಜಧಾನಿ ಇಟಾನಗರದಲ್ಲಿ ಭೂಕಂಪನದಿಂದ ಭೂಮಿ ಹೆಚ್ಚು ನಡುಗಿತ್ತು ಎಂದು ಸ್ಥಳೀಯ ನಾಗರಿಕರು ಹೇಳಿದ್ದಾರೆ. ದಿಬ್ರುಗಡ, ಉತ್ತರ ಲಕ್ಷ್ಮೀಪುರ್, ತೇಝ್‌ಪುರ್, ಗುವಾಹಟಿ ಹಾಗೂ ಅಸ್ಸಾಂನ ಇತರ ಸ್ಥಳಗಳು, ನಾಗಾಲ್ಯಾಂಡ್‌ನ ಕೊಹಿಮಾದಲ್ಲಿ ಭೂಕಂಪನದಿಂದ ಭೂಮಿ ನಡುಗಿದ ಘಟನೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News