ಉಗ್ರ ಸಂಘಟನೆ ತೊರೆದ ಮಜೀದ್ ಖಾನ್‌ಗೆ ಫುಟ್ಬಾಲ್ ತರಬೇತಿ ನೀಡಲು ಸಿದ್ಧ: ಭುಟಿಯಾ

Update: 2017-11-18 13:46 GMT

ಹೊಸದಿಲ್ಲಿ, ನ.18: ಇತ್ತೀಚೆಗೆ ಉಗ್ರ ಸಂಘಟನೆಯನ್ನು ತೊರೆದು ಮನೆಗೆ ವಾಪಸಾಗಿರುವ ಕಾಶ್ಮೀರದ ಪ್ರತಿಭಾವಂತ ಫುಟ್ಬಾಲ್ ಆಟಗಾರ ಮಜೀದ್ ಖಾನ್‌ಗೆ ತರಬೇತಿ ನೀಡಲು ತಾನು ಸಿದ್ಧನಿದ್ದೇನೆ ಎಂದು ಭಾರತದ ಮಾಜಿ ನಾಯಕ ಭೈಚುಂಗ್ ಭುಟಿಯಾ ಜಮ್ಮು-ಕಾಶ್ಮೀರದ ಫುಟ್ಬಾಲ್ ಫೆಡರೇಶನ್‌ಗೆ ಪತ್ರದ ಮುಖೇನ ತಿಳಿಸಿದ್ದಾರೆ.

‘‘ಮಜೀದ್ ಉಗ್ರಗಾಮಿ ಸಂಘಟನೆಯನ್ನು ಸೇರಿದ್ದರೆಂಬ ಸುದ್ದಿ ಕೇಳಿ ನನಗೆ ತುಂಬಾ ಬೇಸರವಾಗಿತ್ತು. ಅವರಿಗೆ ಮತ್ತೊಮ್ಮೆ ಈ ಸೊಗಸಾದ ಪಂದ್ಯವನ್ನು ಆಡಲು ವೇದಿಕೆಯೊಂದರ ಅಗತ್ಯವಿದೆ ಅನಿಸುತ್ತಿದೆ. ನಾನು ಜಮ್ಮು-ಕಾಶ್ಮೀರದ ಫುಟ್ಬಾಲ್ ಸಂಸ್ಥೆಯೊಂದಿಗೆ ಸಂಪರ್ಕದಲ್ಲಿದ್ದೇನೆ. ದಿಲ್ಲಿಯಲ್ಲಿರುವ ಬೈಚುಂಗ್ ಭುಟಿಯಾ ಫುಟ್ಬಾಲ್ ಶಾಲೆಯಲ್ಲಿ ಅವರಿಗೆ ತರಬೇತಿ ನೀಡುವ ಕೊಡುಗೆ ನೀಡಿದ್ದೇನೆ. ನನ್ನ ಕೋಚ್‌ಗಳ ಬಳಿ ಅವರು ತರಬೇತಿ ಪಡೆಯುವುದನ್ನು ಬಯಸುತ್ತೇನೆ. ಅವರಿಗೆ ನಮ್ಮ ಸಂಸ್ಥೆಯ ಬಾಗಿಲು ಸದಾ ಕಾಲ ತೆರೆದಿರುತ್ತದೆ’’ ಎಂದು ಭಾರತದ ಪರ 100 ಅಂತಾರಾಷ್ಟ್ರೀಯ ಪಂದ್ಯವನ್ನಾಡಿರುವ ಏಕೈಕ ಆಟಗಾರ ಭುಟಿಯಾ ಹೇಳಿದ್ದಾರೆ.

‘‘ಮಜೀದ್ ಬಾಲ್ಯದಲ್ಲೇ ಉತ್ತಮ ಫುಟ್ಬಾಲ್ ಆಟಗಾರನಾಗಿದ್ದರು. ಹಲವು ಟ್ರೋಫಿಗಳನ್ನು ಜಯಿಸಿದ್ದೇರೆೆಂದು ತಿಳಿದಿದ್ದೇನೆ. ಆದಷ್ಟು ಬೇಗನೆ ಅವರು ಸಾಮಾನ್ಯ ಜೀವನಕ್ಕೆ ವಾಪಸಾಗಲಿ’’ ಎಂದು ಭುಟಿಯಾ ಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News