ರಾಷ್ಟ್ರೀಯ ಶಾಟ್‌ಗನ್ ಚಾಂಪಿಯನ್‌ಶಿಪ್: ಮಾನವಜಿತ್ ಸಿಂಗ್‌ಗೆ ಚಿನ್ನ

Update: 2017-11-18 18:35 GMT

ಹೊಸದಿಲ್ಲಿ, ನ.18: ಮಾಜಿ ವಿಶ್ವ ಚಾಂಪಿಯನ್ ಮಾನವಜಿತ್ ಸಿಂಗ್ ಸಂಧು ರಾಷ್ಟ್ರೀಯ ಶಾಟ್‌ಗನ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ಟ್ರಾಪ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಈ ಮೂಲಕ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿದ್ದಾರೆ.

ಪಂಜಾಬ್‌ನ್ನು ಪ್ರತಿನಿಧಿಸಿದ ಮಾನ್ವಜಿತ್ 125ರಲ್ಲಿ 117 ಅಂಕ ಗಳಿಸಿ ಎರಡನೆ ಸ್ಥಾನದೊಂದಿಗೆ ಫೈನಲ್‌ಗೆ ಲಗ್ಗೆ ಇಟ್ಟಿದ್ದರು. ಫೈನಲ್‌ನಲ್ಲಿ ಉತ್ತರಪ್ರದೇಶದ ಅನ್ವರ್ ಸುಲ್ತಾನ್ ವಿರುದ್ಧ 45-43 ಅಂತರದಿಂದ ಜಯ ಸಾಧಿಸಿ ಚಿನ್ನ ಗೆದ್ದುಕೊಂಡರು.

 ಅರ್ಹತಾ ಸುತ್ತಿನಲ್ಲಿ 116 ಅಂಕ ಗಳಿಸಿ ಫೈನಲ್‌ಗೆ 4ನೆ ಸ್ಥಾನಿಯಾಗಿ ತಲುಪಿದ್ದ ಅನ್ವರ್ ಬೆಳ್ಳಿ ಜಯಿಸಿದರೆ, ರೊರವರ್ ಸಿಂಗ್ ಸಂಧು 33 ಅಂಕ ಗಳಿಸಿ ಕಂಚಿಗೆ ತೃಪ್ತಿಪಟ್ಟರು. ಜೂನಿಯರ್ ಪುರುಷರ ಟ್ರಾಪ್‌ನಲ್ಲಿ ಹರ್ಯಾಣದ ಲಕ್ಷ ಶೆರೊನ್ ಫೈನಲ್‌ನಲ್ಲಿ ರಾಜಸ್ಥಾನದ ವಿವಾನ್ ಕಪೂರ್‌ರನ್ನು 41-39 ರಿಂದ ಸೋಲಿಸಿ ಪ್ರಶಸ್ತಿ ಜಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News