ಭಾರತದ ಹೆಸರಿಗೆ ಮಸಿ ಬಳಿಯಲು ಹೋಗಿ ಬಾಲ ಸುಟ್ಟುಕೊಂಡ ಪಾಕಿಸ್ತಾನ ರಕ್ಷಣಾ ಫೋರಂ!

Update: 2017-11-19 07:03 GMT

ಹೊಸದಿಲ್ಲಿ, ನ.19: ಭಾರತ ವಿರೋಧಿ ಬರಹಗಳುಳ್ಳ ತಿರುಚಿದ ಚಿತ್ರವೊಂದನ್ನು ಟ್ವೀಟ್ ಮಾಡಿದ್ದಕ್ಕಾಗಿ ಪಾಕಿಸ್ತಾನ ರಕ್ಷಣಾ ಫೋರಂನ ಖಾತೆಯನ್ನು ಟ್ವಿಟರ್ ಅಮಾನತು ಮಾಡಿದೆ.

ಪಾಕಿಸ್ತಾನ ರಕ್ಷಣಾ ಫೋರಂನ ವೆರಿಫೈಡ್ ಟ್ವಿಟರ್ ಖಾತೆ @defencepk ಜಾಮಿಯಾ ಮಸೀದಿಯ ಮುಂದೆ ಕಾಗದವೊಂದನ್ನು ಹಿಡಿದು ನಿಂತುಕೊಂಡಿರುವ ಫೋಟೊವೊಂದನ್ನು ಟ್ವೀಟ್ ಮಾಡಿತ್ತು. ಈ ಕಾಗದದಲ್ಲಿ “ನಾನು ಭಾರತೀಯಳು. ಆದರೆ ನಾನು ಭಾರತವನ್ನು ದ್ವೇಷಿಸುತ್ತೇನೆ. ಏಕೆಂದರೆ ಭಾರತವು ನಾಗಾ, ಕಾಶ್ಮೀರಿಗಳು, ಮಣಿಪುರಿಗಳು, ಹೈದರಾಬಾದಿಗಳು, ಸಿಕ್ಕಿಂ, ಮಿಝೋರಾಮ್, ಗೋವನ್ನರು ಆಕ್ರಮಿಸಿಕೊಂಡಿರುವ ವಸಾಹತಾಗಿದೆ” ಎಂದು ಬರೆಯಲಾಗಿತ್ತು. ಆದರೆ ಸತ್ಯಾಂಶವೆಂದರೆ ಈ ಕಾಗದದಲ್ಲಿ “ನಾನು ಭಾರತದ ಪ್ರಜೆ, ನಮ್ಮ ಸಂವಿಧಾನದ ಜಾತ್ಯಾತೀತ ಮೌಲ್ಯಗಳೊಂದಿಗೆ ನಾನಿದ್ದೇನೆ” ಎಂದು ಬರೆಯಲಾಗಿತ್ತು. 

ಪಾಕಿಸ್ತಾನ ರಕ್ಷಣಾ ಫೋರಂ ಟ್ವೀಟ್ ಮಾಡಿದ್ದು, ತಿರುಚಿದ ಚಿತ್ರವಾಗಿತ್ತು. ಈ ಟ್ವೀಟ್ ವೈರಲ್ ಆಗುತ್ತಲೇ ಭಾರತೀಯ ಟ್ವಿಟರ್ ಬಳಕೆದಾರರು ಎಚ್ಚೆತ್ತುಕೊಂಡು ಟ್ವಿಟರ್ ಗೆ ದೂರು ನೀಡಿದ್ದರು. ಕೆಲ ಹೊತ್ತಿನ ನಂತರ ಪಾಕಿಸ್ತಾನ ರಕ್ಷಣಾ ಫೋರಂ ಟ್ವೀಟನ್ನು ಡಿಲಿಟ್ ಮಾಡಿದ್ದರೂ ಸಾವಿರಾರು ದೂರುಗಳು ಹಿನ್ನೆಲೆಯಲ್ಲಿ ಟ್ವಿಟರ್ ಪಾಕಿಸ್ತಾನ ರಕ್ಷಣಾ ಫೋರಂನ ಖಾತೆಯನ್ನು ಅಮಾನತು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News