×
Ad

ನ.26ಕ್ಕೆ ಮಾಯಾವತಿ ಬೆಂಗಳೂರಿಗೆ

Update: 2017-11-19 21:06 IST

ಬೆಂಗಳೂರು, ನ.19: ಕೇಂದ್ರ ಸರಕಾರದ ಜನವಿರೋಧಿ ನೀತಿ ಹಾಗೂ ಅಲ್ಪಸಂಖ್ಯಾತ, ಹಿಂದುಳಿದ, ದಲಿತ(ಅಹಿಂದ) ಸಮುದಾಯವನ್ನೇ ಗುರಿಯಾಗಿಸಿ ಕೊಂಡು ದೇಶದೆಲ್ಲೆಡೆ ನಡೆಯುತ್ತೀರುವ ದೌರ್ಜನ್ಯಗಳ ವಿರುದ್ಧ ಧ್ವನಿಗೂಡಿಸಲು ನ.26ರಂದು ದಕ್ಷಿಣ ಭಾರತದ ಬೃಹತ್ ಸಮಾವೇಶವನ್ನು ಬಿಎಸ್ಪಿ ಹಮ್ಮಿಕೊಂಡಿದೆ.

ನ.26ರ ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಸಮಾವೇಶ ನಡೆಯಲಿದ್ದು, ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಹಿರಿಯ ಸಂಸದ, ಬಿಎಸ್ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ಅಶೋಕ ಸಿದ್ದಾರ್ಥ, ಅಂಬೇತ್ ರಾಜನ್, ಕರ್ನಾಟಕ ರಾಜ್ಯ ಸಂಯೋಜಕ ಮಾರಸಂದ್ರ ಮುನಿಯಪ್ಪ, ತಮಿಳುನಾಡು ಸಂಯೋಜಕ ಎಂ.ಗೋಪಿನಾಥ್, ಪುದಚೇರಿ ಸಂಯೋಜಕ  ರಾಂಜೀ ಗೌತಮ್, ಬಿಎಸ್ಪಿ ರಾಜ್ಯಾಧ್ಯಕ್ಷ ಎನ್.ಮಹೇಶ್, ಜೆ.ಸುಧಾಕರನ್, ಮೂರ್ತಿ, ಆರ್ಮ್ಸ್ಟ್ರಾಂಗ್ ಸೇರಿ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದಚೇರಿ ರಾಜ್ಯಗಳಿಂದ ಬೂತ್ ಮಟ್ಟದ ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಬಿಎಸ್ಪಿ ಮುಖಂಡರು ಭಾಗವಹಿಸಲಿದ್ದಾರೆ.

ಕೇಂದ್ರದ ವಿರುದ್ಧ ವಾಗ್ದಾಳಿ: ದೇಶದಲ್ಲಿ ಗೋಹತ್ಯೆ ಸಂಬಂಧ ದಲಿತ ಮತ್ತು ಅಲ್ಪಸಂಖ್ಯಾತರ ಮೇಲೆ ನಡೆಯುತ್ತೀರುವ ದೌರ್ಜನ್ಯಗಳನ್ನು ತಡೆಗಟ್ಟುವಲ್ಲಿ ಕೇಂದ್ರ ಸರಕಾರ ವಿಫಲ, ನೋಟು ಅಮಾನ್ಯೀಕರಣ, ದಲಿತರ ಕೊಲೆ ಸೇರಿದಂತೆ ನಾನಾ ವಿಷಯಗಳಿಗೆ ಸಂಬಂಧಪಟ್ಟಂತೆ ಸಮಾವೇಶದಲ್ಲಿ ಚರ್ಚೆ ನಡೆಸಲಾಗುವುದೆಂದು ಬಿಎಸ್ಪಿ ಹೇಳಿದೆ.

ಈಗಾಗಲೇ ದೇಶದ ವಿವಿಧ ರಾಜ್ಯಗಳಲ್ಲಿ ಈ ವಿಷಯಗಳಿಗೆ  ಸಂಬಂಧಪಟ್ಟಂತೆ ಸಮಾವೇಶ ನಡೆಸಲಾಗಿದ್ದು, ದಕ್ಷಿಣ ಭಾರತದಲ್ಲೂ ಸಮಾವೇಶ ನಡೆಸಿ ಜಾಗತಿ ಮೂಡಿಸುವ ಗುರಿ ಹೊಂದಿದೆ.

ಬಿಎಸ್ಪಿ ಸ್ಪರ್ಧೆ: ರಾಜ್ಯದಲ್ಲಿ ನಡೆಯುವ 2018ರ ಚುನಾವಣೆಯಲ್ಲಿ ಮೀಸಲು ಕ್ಷೇತ್ರಗಳು ಒಳಗೊಂಡತೆ 224 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಎಸ್ಪಿ ಸ್ಪರ್ಧಿಸಲಿದ್ದು,  ಇನ್ನು ಈ ಸಮಾವೇಶದಲ್ಲಿ ರಾಜಕೀಯವಾಗಿ ಅಹಿಂದ ವರ್ಗ ಪ್ರಗತಿ ಸಾಧಿಸುವ ಬಗ್ಗೆಯೂ ಚರ್ಚಿ ನಡೆಯಲಿದೆ.

ಸಮಾವೇಶ ಅಗತ್ಯ:ಭಾರತದ ಇತಿಹಾಸ ತಿರುಚಿಸಲಾಗಿದೆ. ಬಿಜೆಪಿ,ಆರೆಸ್ಸೆಸ್ ಅನ್ನು ಸದಾ ಬೆಂಬಲಿಸುವ ಮಾಧ್ಯಮಗಳು ಹುಟ್ಟಿಕೊಂಡಿವೆ. ದೇಶ ಭಕ್ತಿ ಎಂಬ ತೋರಿಕೆಯ ನಾಟಕವಾಡುತ್ತಾ, ಅನ್ಯಧರ್ಮಿಯರನ್ನು ದೇಶ ದ್ರೋಹಿಗಳೆಂಬಂತೆ ಅನುಮಾನದಿಂದ ನೋಡಲಾಗುತ್ತಿದೆ. ಮೀಸಲಾತಿ ರದ್ದತಿ, ರಾಮಮಂದಿರ, ತಾಜ್ಮಹಲ್ ನಂತಹ ವಿಷಯಗಳ ಕುರಿತು ಸುಳ್ಳು ಹೇಳಿಕೆಗಳನ್ನು ನೀಡಿ ಕೋಮು ಗಲಭೆ ಸಷ್ಟಿಸಲು ದೇಶದೆಲ್ಲೆಡೆ ಸಂಚು ನಡೆಸಲಾಗುತ್ತಿದೆ.

ಅಲ್ಲದೆ, ಗೋ ರಕ್ಷಣೆ ಹೆಸರಿನಲ್ಲಿ ದಾದ್ರಿ, ಊನಾ ಸೇರಿ ನಾನಾ ಕಡೆ ಅಮಾಯಕ ಕೊಲೆ ದೌರ್ಜನ್ಯಗಳಿಂದ ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ದಲಿತರ ಬದುಕು ಭಯಾನಕ ಸ್ಥಿತಿಗೆ ತಲುಪಿದೆ.ಹೀಗಾಗಿ, ಇಂತಹ ಬಹತ್ ಸಮಾವೇಶದ ಅಗತ್ಯವಿದೆ ಎಂದು ಬಿಎಸ್ಪಿ ರಾಜ್ಯ ಸಂಯೋಜಕ ಮಾರಸಂದ್ರ ಮುನಿಯಪ್ಪ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News