ಆಸ್ಟ್ರೇಲಿಯ ಕ್ರಿಕೆಟಿಗರಿಗೆ ಉಸೇನ್ ಬೋಲ್ಟ್ ಟ್ರೈನಿಂಗ್!

Update: 2017-11-20 06:05 GMT

ಸಿಡ್ನಿ, ನ.20: ಓಟಕ್ಕೆ ನಿವೃತ್ತಿ ಘೋಷಿಸಿರುವ ‘ಓಟದ ರಾಜ’ ಖ್ಯಾತಿಯ ಉಸೇನ್ ಬೋಲ್ಟ್ ಈಗೇನು ಮಾಡುತ್ತಿದ್ದಾರೆಂಬ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಕಾಡುತ್ತಿರಬಹುದು. ಅದಕ್ಕೆ ಇಲ್ಲಿದೆ ಉತ್ತರ.

 ಇಂಗ್ಲೆಂಡ್ ವಿರುದ್ಧ ಪ್ರತಿಷ್ಠಿತ ಆ್ಯಶಸ್ ಟೆಸ್ಟ್ ಸರಣಿ ಹಿನ್ನೆಲೆಯಲ್ಲಿ ಕ್ರಿಕೆಟ್ ಆಸ್ಟ್ರೇಲಿಯ ಮಂಡಳಿಯು ಬೋಲ್ಟ್‌ಗೆ ಆಸ್ಟ್ರೇಲಿಯಕ್ಕೆ ಆಗಮಿಸಿ ಕ್ರಿಕೆಟಿಗರಿಗೆ ಓಟದ ಬಗ್ಗೆ ತರಬೇತಿ ನೀಡುವಂತೆ ಕೇಳಿಕೊಂಡಿತ್ತು. ಆಹ್ವಾನವನ್ನು ಸ್ವೀಕರಿಸಿರುವ ಬೋಲ್ಟ್ ಪ್ರಸ್ತುತ ಆಸ್ಟ್ರೇಲಿಯದಲ್ಲಿದ್ದಾರೆ.

ಜಮೈಕಾದ ಟ್ರಾಕ್ ಸೂಪರ್‌ಸ್ಟಾರ್, 100 ಮೀ. ಹಾಗೂ 200 ಮೀ.ಓಟದಲ್ಲಿ ವಿಶ್ವ ದಾಖಲೆ ನಿರ್ಮಿಸಿರುವ, 8 ಬಾರಿ ಒಲಿಂಪಿಕ್ಸ್ ಚಾಂಪಿಯನ್ ಆಗಿರುವ ಬೋಲ್ಟ್ ಆಸ್ಟ್ರೇಲಿಯ ಬ್ಯಾಟ್ಸ್‌ಮನ್‌ಗಳಿಗೆ ವಿಕೆಟ್ ನಡುವೆ ಮತ್ತಷ್ಟು ವೇಗವಾಗಿ ಹೇಗೆ ಓಡಬಹುದೆಂಬ ಬಗ್ಗೆ ತರಬೇತಿ ನೀಡುತ್ತಿದ್ದಾರೆ.

31ರ ಹರೆಯದ ಬೋಲ್ಟ್ ಲಂಡನ್‌ನಲ್ಲಿ ಆಗಸ್ಟ್‌ನಲ್ಲಿ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ ಬಳಿಕ ನಿವೃತ್ತಿ ಘೋಷಿಸಿದ್ದರು. ಬ್ಯಾಟಿಂಗ್ ವೇಳೆ ಓಟದ ಬಗ್ಗೆ ಜಾಗೃತಿ ಮೂಡಿಸಲು ಯತ್ನಿಸುತ್ತಿದ್ದಾರೆ.

 ‘‘ಬ್ರಿಸ್ಬೇನ್‌ನಲ್ಲಿ ಗುರುವಾರ ಆರಂಭವಾಗಲಿರುವ ಮೊದಲ ಆ್ಯಶಸ್ ಟೆಸ್ಟ್‌ಗೆ ಮೊದಲು ಬೋಲ್ಟ್ ಸಲಹೆ ನಮಗೆ ಅನುಕೂಲವಾಗಿದೆ. ವಿಕೆಟ್ ನಡುವೆ ಹೇಗೆ ಮತ್ತಷ್ಟು ವೇಗವಾಗಿ ಓಡಬಹುದೆಂಬ ಬಗ್ಗೆ ಸಲಹೆ ನೀಡಿದ್ದಾರೆ’’ ಎಂದು ಆಸ್ಟ್ರೇಲಿಯ ದಾಂಡಿಗ ಪೀಟರ್ ಹ್ಯಾಂಡ್ಸ್‌ಕಂಬ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News