×
Ad

ನ.23 ರಿಂದ ಕಿರಣ ಭೌತಶಾಸ್ತ್ರ ಕುರಿತ ರಾಷ್ಟ್ರೀಯ ಸಮ್ಮೇಳನ

Update: 2017-11-20 21:33 IST

ಬೆಂಗಳೂರು, ನ.20: ಬೆಂಗಳೂರು ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ವಿಭಾಗ ಹಾಗೂ ಕೇಂದ್ರ ಸರಕಾರದ ಪರಮಾಣು ಖನಿಜ ಅನ್ವೇಷಣೆ ಹಾಗೂ ಸಂಶೋಧನಾ ನಿರ್ದೇಶನಾಲಯದ ಸಹಯೋಗದೊಂದಿಗೆ ನ.23 ಮತ್ತು 24 ರಂದು ವಿವಿಯ ಕ್ಯಾಂಪಸ್‌ನಲ್ಲಿರುವ ಪ್ರೊ.ವೆಂಕಟಗಿರಿಗೌಡ ಸಭಾಂಗಣದಲ್ಲಿ ಕಿರಣ ಭೌತಶಾಸ್ತ್ರದ ರಾಷ್ಟ್ರೀಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ.

ಸಮ್ಮೇಳನವನ್ನು ಪರಮಾಣು ಖನಿಜ ಅನ್ವೇಷಣೆ ಹಾಗೂ ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕ ಎಲ್.ಕೆ.ನಂದ ಉದ್ಘಾಟಿಸಲಿದ್ದು, ಸಮ್ಮೇಳನದ ಅಧ್ಯಕ್ಷತೆಯನ್ನು ವಿವಿ ಕುಲಪತಿ ಪ್ರೊ. ಎಚ್.ಎನ್.ರಮೇಶ್ ವಹಿಸಲಿದ್ದಾರೆ. ಈ ವೇಳೆ ನಿವೃತ್ತ ವಿಜ್ಞಾನಿ ಎಂ.ಆರ್.ಅಯ್ಯರ್ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News