ತಾಯಿ-ಮಗುವಿನ ಆರೈಕೆ ಸರಕಾರಿ-ಖಾಸಗಿ ಆಸ್ಪತ್ರೆಗಳ ಧ್ಯೇಯವಾಗಲಿ: ಸಚಿವೆ ಪಂಕಜಾ ಮುಂಡೆ

Update: 2017-11-20 16:11 GMT

ಬೆಂಗಳೂರು, ನ.20: ಗರ್ಭಿಣಿ, ಬಾಣಂತಿ ಮಹಿಳೆ ಮತ್ತು ನವಜಾತ ಶಿಶುಗಳಿಗೆ ಗುಣಮಟ್ಟದ ಆರೋಗ್ಯವನ್ನು ನೀಡುವುದು ಖಾಸಗಿ ಹಾಗೂ ಸಾರ್ವಜನಿಕ ಆಸ್ಪತ್ರೆಗಳ ಧ್ಯೇಯವಾಗಬೇಕು ಎಂದು ಮಹಾರಾಷ್ಟ್ರದ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಪಂಕಜಾ ಮುಂಡೆ ತಿಳಿಸಿದ್ದಾರೆ.

ಫೊಗ್ಸಿ(ಫೆಡರೇಶನ್ ಆಫ್ ಅಬ್‌ಸ್ಟೆಟ್ರಿಕ್ ಆ್ಯಂಡ್ ಗೈನಕಾಲಜಿಕಲ್ ಸೊಸೈಟೀಸ್ ಆಫ್ ಇಂಡಿಯಾ), ಜೆಪೀಗೊ ಸಹಯೋಗದೊಂದಿಗೆ ಭಾರತದ ಖಾಸಗಿ ವಲಯದಲ್ಲಿ ಮಾತೃ ಮತ್ತು ನವಜಾತ ಆರೈಕೆಯ ರಾಷ್ಟ್ರವ್ಯಾಪಿ ಉಪಕ್ರಮ ‘ಮಾನ್ಯತಾ’ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಗರ್ಭಿಣಿ ಮಹಿಳೆಯರನ್ನು ಮುತುವರ್ಜಿಯಿಂದ ನೋಡಿಕೊಳ್ಳುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯ. ಮುಖ್ಯವಾಗಿ ವೈದ್ಯರು ತಾಯಂದಿರ ಆರೋಗ್ಯದ ಕುರಿತು ಪೋಷಕರಲ್ಲಿ ಜಾಗೃತಿ ಮೂಡಿಸುವುದು ತೀರ ಅಗತ್ಯವಿದೆ. ಈ ನಿಟ್ಟಿನಲ್ಲಿ ‘ಮಾನ್ಯತಾ’ ಕೇವಲ ಖಾಸಗಿ ಆಸ್ಪತ್ರೆಗಳಿಗೆ ಮಾತ್ರ ಸೀಮಿತವಾಗದೆ, ದೇಶದ ಎಲ್ಲ ಸಾರ್ವಜನಿಕ ಆಸ್ಪತ್ರೆಗಳಲ್ಲೂ ಅನುಷ್ಠಾನಗೊಳಿಸಲು ಶ್ರಮಿಸಬೇಕು ಎಂದು ಅವರು ಹೇಳಿದರು.

ಮಾನ್ಯತಾ ರಾಷ್ಟ್ರೀಯ ಸಂಚಾಲಕಿ ಡಾ.ಹೇಮಾ ದಿವಾಕರ್ ಮಾತನಾಡಿ, ದೇಶದ ಯಾವೊಬ್ಬ ಗರ್ಭಿಣಿ ಮಹಿಳೆ ತನ್ನ ಮಗುವಿಗೆ ಜನ್ಮ ನೀಡುವ ಸಂದರ್ಭದಲ್ಲಿ ಮರಣ ಹೊಂದಬಾರದು. ಈ ನಿಟ್ಟಿನಲ್ಲಿ ಮಾನ್ಯತಾ ಯೋಜನೆಯಿಂದ ಗರ್ಭಿಣಿ ಮಹಿಳೆಯಗೆ ಗುಣಮಟ್ಟದ ಆರೈಕೆ ಮಾಡಲಿದೆ ಎಂದು ತಿಳಿಸಿದರು.

ಈ ವೇಳೆ ಸಿನಿಮಾ ನಟಿ ಶಿಲ್ಪಾ ಶೆಟ್ಟಿ ಮಾನ್ಯತಾ ಲಾಂಛನವನ್ನು ಬಿಡುಗಡೆಗೊಳಿಸಿದರು.

ಜಾತಿ, ಧರ್ಮ ಹಾಗೂ ಹಣ ಬಲದ ಮೇಲೆ ಚುನಾವಣೆಗಳಲ್ಲಿ ಆರಿಸಿ ಬರುವ ಸರಕಾರಗಳು ತಾವು ನೀಡಿರುವ ಭರವಸೆಗಳನ್ನು ಸಂಪೂರ್ಣವಾಗಿ ಮರೆತಿರುತ್ತಾರೆ. ಆದರೆ, ಉದ್ಯೋಗಕ್ಕಾಗಿ ಯುವ ಜನರು ವೇದಿಕೆಯು ಬದುಕಿನ ಪ್ರಶ್ನೆಯಾದ ಉದ್ಯೋಗದ ಆಧಾರದ ಮೇಲೆ ಸರಕಾರಗಳನ್ನು ಪ್ರಶ್ನಿಸುತ್ತಿದ್ದಾರೆ. ಅದಕ್ಕಾಗಿ ಪ್ರತ್ಯೇಕ ಆ್ಯಪ್ ಮಾಡಿರುವುದು ಅಭಿನಂದನಾರ್ಹವಾದುದು.
-ಡಾ.ವಾಸು, ಸಾಮಾಜಿಕ ಹೋರಾಟಗಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News