×
Ad

ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಎನ್‌ಎಸ್‌ಎಟಿ ಪರೀಕ್ಷೆ

Update: 2017-11-21 19:18 IST

ಬೆಂಗಳೂರು, ನ.21: ಎಸೆಸೆಲ್ಸಿ ವಿದ್ಯಾರ್ಥಿಗಳು ತಮ್ಮ ಮುಂದಿನ ಶೈಕ್ಷಿಣಿಕ ಕ್ಷೇತ್ರವನ್ನು ಗುರುತಿಸಿಕೊಳ್ಳುವುದಕ್ಕೆ ಸಹಾಯಕವಾಗುವಂತೆ ನಾರಾಯಣ ಶೈಕ್ಷಣಿಕ ಸಂಸ್ಥೆಯು ನ.26ರಂದು ಎನ್‌ಎಸ್‌ಎಟಿ(ನಾರಾಯಣ ಸ್ಕೂಲಾಸ್ಟಿಕ್ ಆಪ್ಟಿಟ್ಯೂಡ್ ಟೆಸ್ಟ್) ಪರೀಕ್ಷೆ ನಡೆಸುತ್ತಿದೆ.

ಈ ಕುರಿತು ನಾರಾಯಣ ಶಿಕ್ಷಣ ಸಂಸ್ಥೆಗಳ ಸಮೂಹದ ವ್ಯವಸ್ಥಾಪಕ ನಿರ್ದೇಶಕಿ ಡಾ.ಸಿಂಧೂರ ಮಾತನಾಡಿ, ಎನ್‌ಎಸ್‌ಎಟಿ ಪರೀಕ್ಷೆಯು ವಿದ್ಯಾರ್ಥಿಗಳಿಗೆ 2020ರ ಐಐಟಿ, ಜೆಇಇ, ನೀಟ್ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಅತ್ಯುತ್ತಮ ಅವಕಾಶವನ್ನು ಮಾಡಿಕೊಡಲಿದೆ ಎಂದರು.

ಬಹುತೇಕ ವಿದ್ಯಾರ್ಥಿಗಳು ತಮ್ಮ ಮುಂದಿನ ವ್ಯಾಸಂಗ ಮತ್ತು ವೃತ್ತಿ ಜೀವನ ಕುರಿತು ಏನು ಮಾಡಬೇಕು ಎಂಬುದರ ಕುರಿತು ಮಾಹಿತಿ ತಿಳಿದಿರುವುದಿಲ್ಲ. ಈ ಪರೀಕ್ಷೆಯಿಂದ ವಿದ್ಯಾರ್ಥಿಗಳು ತಮ್ಮ ವೃತ್ತಿ ಜೀವನವನ್ನು ಆಯ್ದುಕೊಳ್ಳಲು ಅವಕಾಶ ಮತ್ತು ಪೂರಕ ಮಾಹಿತಿಯನ್ನು ನೀಡಲಿದೆ. ಈ ಪರೀಕ್ಷೆ ಉಚಿತವಾಗಿದ್ದು, ವಿದ್ಯಾರ್ಥಿಗಳನ್ನು ಉತ್ತೇಜಿಸಲು ವಿದ್ಯಾರ್ಥಿ ವೇತನ ಮತ್ತು ಪುರಸ್ಕಾರವನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ.

ಈ ಪರೀಕ್ಷೆ ಸಿಬಿಎಸ್‌ಇ, ಐಸಿಎಸ್‌ಇ ಮತ್ತು ಎಸೆಸೆಲ್ಸಿ ಮಂಡಳಿಯ ಪಠ್ಯಕ್ರಮ ಆಧಾರವಾಗಿರುತ್ತದೆ. ಗಣಿತ, ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವ ಶಾಸ್ತ್ರ ಮತ್ತು ಇಂಗ್ಲಿಷ್ ಪರೀಕ್ಷೆಯಲ್ಲಿ ತಲಾ 60 ಅಂಕಗಳ ಪ್ರಶ್ನೆಗಳಿರುತ್ತವೆ. ಪರೀಕ್ಷೆಯ ನಂತರ ವಿದ್ಯಾರ್ಥಿಗಳು ಮತ್ತು ಪೋಷಕರಿಗಾಗಿ ವಿಷಯ ತಜ್ಞರು ಜಾಗೃತಿ ಶಿಬಿರವನ್ನು ನಡೆಸಿಕೊಡಲಿದ್ದಾರೆ. ಎನ್‌ಎಸ್‌ಎಟಿ-2018 ಪರೀಕ್ಷೆಗಾಗಿ ನೋಂದಣಿ ಆರಂಭವಾಗಿದೆ. ಆಸಕ್ತಿಯಿರುವ ಎಸೆಸೆಲ್ಸಿ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ನಾರಾಯಣ ವಿದ್ಯಾಸಂಸ್ಥೆಯ ಶಾಖೆಯನ್ನು ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News