ಕುವೆಂಪು ರಾಷ್ಟ್ರೀಯ ಪುರಸ್ಕಾರಕ್ಕೆ ಅಸ್ಸಾಮಿ ಸಾಹಿತಿ ಹೊಮೆನ್ ಬೊರ್ಗೊ ಹೈನ್, ನೀಲ್‌ಮಣಿ ಫೂಕನ್ ಆಯ್ಕೆ
Update: 2017-11-21 19:25 IST
ಬೆಂಗಳೂರು, ನ.21: ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕೊಡಮಾಡುವ ಕುವೆಂಪು ರಾಷ್ಟ್ರೀಯ ಪುರಸ್ಕಾರ-2017ಕ್ಕೆ ಅಸ್ಸಾಮಿ ಭಾಷೆಯ ಸಾಹಿತಿಗಳಾದ ಹೊಮೆನ್ ಬೊರ್ಗೊ ಹೈನ್ ಹಾಗೂ ನೀಲ್‌ಮಣಿ ಫೂಕನ್ ಆಯ್ಕೆಯಾಗಿದ್ದಾರೆ.
ರಾಷ್ಟ್ರ ಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಹಂಪ ನಾಗರಾಜಯ್ಯ ನೇತೃತ್ವದಲ್ಲಿ ನ.18ರಂದು ನಗರದಲ್ಲಿ ಹಿರಿಯ ಸಾಹಿತಿಗಳಾದ ಅಗ್ರಹಾರ ಕೃಷ್ಣಮೂರ್ತಿ, ಬಂಗಾಳಿ ಸಾಹಿತಿ ಡಾ.ಶ್ಯಾಮಲ್ ಭಟ್ಟಾಚಾರ್ಯ, ಒರಿಯಾ ಲೇಖಕ ಡಾ.ಪ್ರಮೋದ್ ಕುಮಾರ್ ಪರಿದ, ಕಡಿದಾಳ್ ಪ್ರಕಾಶ್ ಒಳಗೊಂಡ ಪ್ರಶಸ್ತಿ ಆಯ್ಕೆ ಸಮಿತಿಯ ಸಭೆ ನಡೆಸಲಾಯಿತು.
ಆಯ್ಕೆ ಸಮಿತಿಯ ಒಮ್ಮತದಂತೆ ಅಸ್ಸಾಮಿಯ ಇಬ್ಬರು ಹಿರಿಯ ಸಾಹಿತಿಗಳಿಗೆ ಜಂಟಿಯಾಗಿ ಕುವೆಂಪು ರಾಷ್ಟ್ರೀಯ ಪುರಸ್ಕಾರ-2017 ನೀಡಲು ತೀರ್ಮಾನಿಸಲಾಯಿತು ಎಂದು ಪ್ರತಿಷ್ಠಾನದ ಸಹ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.