ವಂತಿಗೆ ಪಾವತಿಸಲು ಜ.15ಕೊನೆಯ ದಿನ
ಬೆಂಗಳೂರು, ನ.21: ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ಕಾಯ್ದೆ 1965ರ ವ್ಯಾಪ್ತಿಯಲ್ಲಿ ಬರುವ ಎಲ್ಲ ಕಾರ್ಖಾನೆಗಳು, ಪ್ಲಾಂಟೇಶನ್‌ಗಳು, ಮೋಟಾರು ವಾಹನ ಸಂಸ್ಥೆಗಳು ಹಾಗೂ 50 ಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು, ಚಾರಿಟಬಲ್ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು/ಐಟಿಬಿಟಿ ಸಂಸ್ಥೆಗಳು ಜ.15, 2018ರೊಳಗೆ ಕಡ್ಡಾಯವಾಗಿ ವಂತಿಗೆ ಪಾವತಿಸಬೇಕಾಗಿದೆ.
ಕಾರ್ಮಿಕರು/ಮಾಲಕರು ಸಲ್ಲಿಸಬೇಕಾದ ವಂತಿಗೆ ಮೊತ್ತವನ್ನು 6:12 ರಿಂದ 20:40 ಅನುಪಾತಕ್ಕೆ ಹೆಚ್ಚಿಸಿ ಆದೇಶಿದೆ. ಇನ್ನು ಮುಂದೆ ಒಬ್ಬ ಕಾರ್ಮಿಕನಿಗೆ 60ರೂ.ನಂತೆ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ ಅಧಿನಿಯಮ 7ಎ ಪ್ರಕಾರ ಫಾರಂ ’ಡಿ’ ನಮೂನೆಯೊಂದಿಗೆ ವಂತಿಗೆ ಪಾವತಿಸುವುದು ಕಡ್ಡಾಯವಾಗಿದೆ.
ನಿಯಮ ಪಾಲಿಸದ ಸಂಸ್ಥೆಗಳಿಗೆ ಶೇ.18ಬಡ್ಡಿಯನ್ನು ದಂಡವಾಗಿ ವಿಧಿಸಬಹುದು ಹಾಗೂ ಕಲ್ಯಾಣ ಆಯುಕ್ತರಿಂದ ತಪಾಸಣೆ ಹಾಗೂ ತನಿಖೆಗೆ ಒಳಪಡಬೇಕಾಗುತ್ತದೆ. ಈ ಕುರಿತು ಹೆಚ್ಚಿನ ಮಾತಿಗಾಗಿ ದೂ.080-23570266 ಮೂಲಕ ಸಂಪರ್ಕಿಸಲು ಪ್ರಕಟನೆಯಲ್ಲಿ ಕೋರಲಾಗಿದೆ.