ಎಟಿಪಿ ರ‍್ಯಾಂಕಿಂಗ್‌: ಅಗ್ರ ಸ್ಥಾನ ಕಾಯ್ದುಕೊಂಡ ನಡಾಲ್, ಫೆಡರರ್

Update: 2017-11-21 18:22 GMT

ಮ್ಯಾಡ್ರಿಡ್, ನ.21: ಸ್ಪೇನ್‌ನ ರಫೆಲ್ ನಡಾಲ್ ಹಾಗೂ ಸ್ವಿಸ್‌ನ ರೋಜರ್ ಫೆಡರರ್ ಮಂಗಳವಾರ ಬಿಡುಗಡೆಯಾಗಿರುವ ಎಟಿಪಿ ವಿಶ್ವ ಸಿಂಗಲ್ಸ್ ರ‍್ಯಾಂಕಿಂಗ್‌ನಲ್ಲಿ ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಲಂಡನ್‌ನಲ್ಲಿ ರವಿವಾರ ನಡೆದ ಎಟಿಪಿ ಫೈನಲ್ಸ್‌ನಲ್ಲಿ ಬೆಲ್ಜಿ ಯಂನ ಡೇವಿಡ್ ಗೊಫಿನ್‌ರನ್ನು 7-5, 4-6, 6-3 ಅಂತರದಿಂದ ಮಣಿಸಿ ಪ್ರಶಸ್ತಿ ಜಯಿಸಿದ್ದ ಬಲ್ಗೇರಿಯದ ಗ್ರಿಗೊರ್ ಡಿಮಿಟ್ರೊವ್ ಮೂರನೆ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ. ಜರ್ಮನಿಯ ಅಲೆಕ್ಸಾಂಡರ್ ಝ್ವೆರೆವ್(4,610 ಅಂಕ) ಆಸ್ಟ್ರೀಯದ ಡೊಮಿನಿಕ್ ಥೀಮ್ ಕ್ರಮವಾಗಿ 3ನೇ ಹಾಗೂ 4ನೇ ಸ್ಥಾನದಲ್ಲಿದ್ದಾರೆ. ಈ ತಿಂಗಳಾರಂಭದಲ್ಲಿ ಪ್ಯಾರಿಸ್ ಮಾಸ್ಟರ್ಸ್ ಪ್ರಶಸ್ತಿ ಜಯಿಸಿರುವ ಅಮೆರಿಕದ ಜಾಕ್ ಸಾಕ್ 8ನೆ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ.

►ಹೊಸ ಎಟಿಪಿ ರ‍್ಯಾಂಕಿಂಗ್‌ ಹಾಗೂ ಅಂಕ ಇಂತಿದೆ...

1. ರಫೆಲ್ ನಡಾಲ್(ಸ್ಪೇನ್)10,645 ಅಂಕ

2. ರೋಜರ್ ಫೆಡರರ್(ಸ್ವಿಸ್)9,605 ಅಂಕ

3.ಗ್ರಿಗೊರ್ ಡಿಮಿಟ್ರೊವ್(ಬಲ್ಗೇರಿಯ) 5,150

4.ಅಲೆಕ್ಸಾಂಡರ್ ಝ್ವೆರೆವ್(ಜರ್ಮನಿ)4,610

5. ಡೊಮಿನಿಕ್ ಥೀಮ್(ಆಸ್ಟ್ರೀಯ)4,015

6. ಮರಿನ್ ಸಿಲಿಕ್(ಕ್ರೊಯೇಷಿಯ)3,805

7.ಡೇವಿಡ್ ಗೊಫಿನ್(ಬೆಲ್ಜಿಯಂ)3,775

8. ಜಾಕ್ ಸಾಕ್(ಅಮೆರಿಕ)3,165

9. ಸ್ಟಾನ್ ವಾವ್ರಿಂಕ(ಸ್ವಿಸ್)3,150

 10. ಪಾಬ್ಲೊ ಕರ್ರೆನೊ(ಸ್ಪೇನ್)2,615.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News