ಭಾರೀ ಮಳೆಗೆ ಜಿದ್ದಾ ತತ್ತರ: ಜನಜೀವನ ಅಸ್ತವ್ಯಸ್ತ, ಮೂವರು ಮೃತ್ಯು

Update: 2017-11-22 10:02 GMT

ಜಿದ್ದಾ, ನ.22: ಮಂಗಳವಾರ ಸುರಿದ ಭಾರೀ ಮಳೆಯಿಂದ ಸೌದಿ ಅರೇಬಿಯಾದ ಪಶ್ಚಿಮ ಭಾಗದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಜಿದ್ದಾದಲ್ಲಿ  ಬೆಳಗ್ಗಿನಿಂದ ಆರಂಭವಾದ ಮಳೆಯಿಂದ ಪ್ರವಾಹ ಉಂಟಾಗಿದ್ದು, ವಾಹನಗಳು, ಅಂಗಡಿಗಳಿಗೆ ನೀರು ನುಗ್ಗಿದೆ. 481 ಮಂದಿಯನ್ನು ನಾಗರಿಕ ರಕ್ಷಣಾ ತಂಡ ರಕ್ಷಿಸಿದೆ.

ಪ್ರವಾಹದ ಪರಿಣಾಮ ಮನೆ ಕುಸಿದು ಹಾಗು ವಿದ್ಯುತ್ ಆಘಾತದಿಂದ ಮೂವರು ಮೃತಪಟ್ಟಿದ್ದಾರೆ ಎಂದು ಪ್ರಾದೇಶಿಕ ಪತ್ರಗಳು ವರದಿ ಮಾಡಿವೆ. 200ರಷ್ಟು ಮಂದಿ ನಾಗರಿಕ ರಕ್ಷಣಾ ತಂಡದ ಸಹಾಯ ಕೋರಿದ್ದಾರೆ. ಜಿದ್ದಾ, ಮಕ್ಕಾ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ತಡೆಹಿಡಿಯಲಾಯಿತು.

ಜಿದ್ದಾ ವಿಮಾನ ನಿಲ್ದಾಣಕ್ಕೆ ತಲುಪಲು ಸಾಧ್ಯವಾಗದೆ ಹಲವರಿಗೆ ವಿಮಾನದಲ್ಲಿ ಪ್ರಯಾಣಿಸಲು ಸಾಧ್ಯವಾಗಿಲ್ಲ. ಜಿದ್ದಾ ಬಂದರಿನ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News