×
Ad

ಬೆಂಗಳೂರು: ಮಹಿಳಾ ಇಂಜಿನಿಯರ್ ಆತ್ಮಹತ್ಯೆ

Update: 2017-11-22 17:27 IST

ಬೆಂಗಳೂರು, ನ.22: ಹತ್ತನೆ ಮಹಡಿಯಿಂದ ಜಿಗಿದು ಮಹಿಳಾ ಇಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಮಾರತ್ತಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗೋವಾ ಮೂಲದ ಗೀತಾಂಜಲಿ (27) ಎಂಬವರು ಆತ್ಮಹತ್ಯೆ ಮಾಡಿಕೊಂಡ ಮಹಿಳಾ ಇಂಜಿನಿಯರ್ ಎಂದು ಪೊಲೀಸರು ಗುರುತಿಸಿದ್ದಾರೆ.

ನಗರದ ಮಾರತ್ತಹಳ್ಳಿರುವ ಸೆಸ್ನಾ ಬಿಸಿನೆಸ್ ಪಾರ್ಕ್ ಕಂಪೆನಿ ಕಟ್ಟಡದ ಹತ್ತನೆ ಮಹಡಿ ಮೇಲಿಂದ ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ  ಮಹಿಳಾ ಇಂಜಿನಿಯರ್ ಗೀತಾಂಜಲಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

ಈ ಬಗ್ಗೆ ಮೊಕದ್ದಮೆ ದಾಖಲಿಸಿಕೊಂಡಿರುವ ಮಾರತ್ತಹಳ್ಳಿ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದು, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ ಎಂದು ನಗರದ ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News