×
Ad

ಬೈಕ್ ಕಳವು ಪ್ರಕರಣ: ಆರೋಪಿ ಬಂಧನ

Update: 2017-11-22 18:00 IST

ಬೆಂಗಳೂರು, ನ.22: ಬೈಕ್ ಕಳವು ಆರೋಪದ ಮೇಲೆ ಯುವಕನೊಬ್ಬನನ್ನು ಬಂಧಿಸಿರುವ ನಗರದ ಚಿಕ್ಕಜಾಲ ಠಾಣಾ ಪೊಲೀಸರು 3.60 ಲಕ್ಷ ಮೌಲ್ಯದ 10 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ನಗರದ ಯಲಹಂಕ ಅಗ್ರಹಾರ ದಾಸರಹಳ್ಳಿಯ ಸುಹೈಲ್(20) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ನ.20ರಂದು ಚಿಕ್ಕಜಾಲ ಸಮೀಪ ಬೈಕ್‌ಗಳನ್ನು ಮಾರಾಟ ಮಾಡುವಾಗ ಗಸ್ತಿನಲ್ಲಿದ್ದ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿ ಸುಹೈಲ್ ಬಂಧನದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕೊತ್ತನೂರು, ಸಂಪಿಗೆಹಳ್ಳಿ ಸೇರಿ ಐದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣಗಳು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News