ಸುಮಿತ್, ಭಾಂಬ್ರಿ ಸೆಮಿಫೈನಲ್ ಗೆ

Update: 2017-11-23 18:39 GMT

ಬೆಂಗಳೂರು, ನ.23: ಭಾರತದ ಶ್ರೇಯಾಂಕರಹಿತ ಸುಮಿತ್ ನಗಾಲ್ ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದು, ಸಹ ಆಟಗಾರ ಯೂಕಿ ಭಾಂಬ್ರಿ ಅವರನ್ನು ಎದುರಿಸಲಿದ್ದಾರೆ. ಗುರುವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸುಮಿತ್ ಸ್ಲೋವಾನಿಯದ ಅಗ್ರ ಶ್ರೇಯಾಂಕದ ಆಟಗಾರ ಬ್ಲೇಝ್ ಕಾವ್‌ಸಿಕ್‌ರನ್ನು 6-3, 6-4 ನೇರ ಸೆಟ್‌ಗಳಿಂದ ಮಣಿಸಿ ಶಾಕ್ ನೀಡಿದ್ದಾರೆ.

 ಸುಮಿತ್ ಸೆಮಿಫೈನಲ್‌ನಲ್ಲಿ ಯೂಕಿ ಭಾಂಬ್ರಿಯನ್ನು ಮುಖಾಮುಖಿಯಾಗಲಿದ್ದಾರೆ. ಭಾಂಬ್ರಿ ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ಸಹ ಆಟಗಾರ ಪ್ರಜ್ಞೇಶ್ ಗುಣೇಶ್ವರನ್‌ರನ್ನು 7-5, 6-2 ಸೆಟ್‌ಗಳಿಂದ ಮಣಿಸಿದ್ದಾರೆ. ‘‘ಸೆಮಿ ಫೈನಲ್‌ನಲ್ಲಿ ಯಾರು ಎದುರಾಳಿ ಎನ್ನುವುದು ಮುಖ್ಯವಲ್ಲ. ನಾನು ನನ್ನ ಪಂದ್ಯದತ್ತ ಗಮನ ನೀಡುವೆ’’ ಎಂದು ಭಾಂಬ್ರಿ ಹೇಳಿದ್ದಾರೆ. ಚೈನೀಸ್ ತೈಪೆಯ ಸಂಗ್-ಹುವಾ ಫ್ರಾನ್ಸ್‌ನ ಅಂಟೊನಿ ಎಸ್ಕೊಫಿಯೆರ್‌ರನ್ನು 6-4,6-4 ರಿಂದ ಸೋಲಿಸಿದರು. ಸೆಮಿ ಫೈನಲ್‌ನಲ್ಲಿ ಬ್ರಿಟನ್‌ನ ಜೇ ಕ್ಲಾರ್ಕ್‌ರನ್ನು ಎದುರಿಸಲಿದ್ದಾರೆ. ಕ್ಲಾರ್ಕ್ ಮತ್ತೊಂದು ಪಂದ್ಯದಲ್ಲಿ ಕ್ರೊಯೇಷಿಯದ ಅಂಟೆ ಪಾವಿಕ್‌ರನ್ನು 6-2, 4-6, 7-6 ರಿಂದ ಮಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News