ನಾಗಾಲ್ಯಾಂಡ್ ಕೇವಲ 2 ರನ್‌ಗೆ ಆಲೌಟ್, ಒಂದೇ ಎಸೆತಕ್ಕೆ ಪಂದ್ಯ ಗೆದ್ದ ಕೇರಳ!

Update: 2017-11-24 08:59 GMT

ಗುಂಟೂರು, ನ.24: ಕ್ರಿಕೆಟ್ ಇತಿಹಾಸದಲ್ಲಿ ಸ್ಕೋರ್ ಬೋರ್ಡ್ ವಿಷಯದಲ್ಲಿ ನಾಗಾಲ್ಯಾಂಡ್-ಕೇರಳ ಪಂದ್ಯದ ಇನಿಂಗ್ಸ್ ಅತ್ಯಂತ ವಿಭಿನ್ನವಾಗಿ ನಿಲ್ಲಲಿದೆ.

ಶುಕ್ರವಾರ ಬಿಸಿಸಿಐ ಆಶ್ರಯದಲ್ಲಿ ನಡೆದ ಅಂಡರ್-19 ಮಹಿಳಾ ಏಕದಿನ ಕ್ರಿಕೆಟ್ ಲೀಗ್‌ನಲ್ಲಿ ಕೇರಳದ ವಿರುದ್ಧ ನಾಗಾಲ್ಯಾಂಡ್ ತಂಡ ಕೇವಲ 2 ರನ್‌ಗೆ ಆಲೌಟಾಯಿತು. 9 ಆಟಗಾರ್ತಿಯರು ಶೂನ್ಯಕ್ಕೆ ಔಟಾದರು. 18 ಎಸೆತಗಳನ್ನು ಎದುರಿಸಿದ್ದ್ದ ನಾಗಾಲ್ಯಾಂಡ್‌ನ ಆರಂಭಿಕ ಆಟಗಾರ್ತಿ ಮೇನಕಾ ಕೇವಲ 1 ರನ್ ಗಳಿಸಿದ್ದರೆ, ಮತ್ತೊಂದು ರನ್ ಕೇರಳ ಬೌಲರ್ ಅಲೀನಾ ಸುರೇಂದ್ರನ್ ಎಸೆದ ವೈಡ್ ರೂಪದಲ್ಲಿ ಬಂತು.

ಗೆಲುವಿಗೆ 3 ರನ್ ಗುರಿ ಪಡೆದ ಕೇರಳ ಒಂದೇ ಎಸೆತದಲ್ಲಿ ಗೆಲುವಿನ ಸ್ಕೋರ್ ದಾಖಲಿಸಿತು. ನಾಗಾಲ್ಯಾಂಡ್‌ನ ಆರಂಭಿಕ ಬೌಲರ್ ದೀಪಿಕಾ ಒಂದು ವೈಡ್ ಎಸೆದರು. ಅನ್ಸು ಎಸ್.ರಾಜು ಮತ್ತೊಂದು ಎಸೆತದಲ್ಲಿ ಬೌಂಡರಿ ಬಾರಿಸಿ ತಂಡಕ್ಕೆ ಗೆಲುವು ತಂದರು.

ಅಲೀನಾ ಸುರೇಂದ್ರನ್ ಒಂದು ರನ್ ನೀಡಿದರೂ ಒಂದೂ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಆದರೆ, ಇನ್ನೋರ್ವ ಆಟಗಾರ್ತಿ ಸೌರಭಿ 6 ಮೇಡನ್ ಓವರ್‌ಗಳ ಸಹಿತ 2 ವಿಕೆಟ್‌ಗಳನ್ನು ಪಡೆದರು. ನಾಯಕಿ ಮಿನ್ನು ಮಣಿ 4 ಓವರ್‌ಗಳಲ್ಲಿ ಒಂದೂ ರನ್ ನೀಡದೇ 4 ವಿಕೆಟ್ ಕಬಳಿಸಿದ್ದಾರೆ. ಸಾಂಡ್ರಾ ಸುರೆನ್ ಹಾಗೂ ಬಿಬಿ ಸೆಬಾಸ್ಟಿಯನ್  ಒಂದೂ ರನ್ ನೀಡದೇ ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News