ಪಿಸ್ಟೋರಿಯಸ್ ಜೈಲು ಶಿಕ್ಷೆ ಪ್ರಮಾಣ ಹೆಚ್ಚಿಸಿದ ದಕ್ಷಿಣ ಆಫ್ರಿಕ ಸುಪ್ರೀಂಕೋರ್ಟ್

Update: 2017-11-24 09:33 GMT

ಜೋಹಾನ್ಸ್‌ಬರ್ಗ್, ನ.24: ಹತ್ಯೆ ಪ್ರಕರಣದಲ್ಲಿ ಸಿಲುಕಿರುವ ‘ಬ್ಲೇಡ್ ರನ್ನರ್’ ಖ್ಯಾತಿಯ ಆಸ್ಕರ್ ಪಿಸ್ಟೋರಿಯಸ್ ವಿರುದ್ಧ ಜೈಲು ಶಿಕ್ಷೆಯ ಪ್ರಮಾಣವನ್ನು ದಕ್ಷಿಣ ಆಫ್ರಿಕದ ಸುಪ್ರೀಂಕೋರ್ಟ್ 13 ವರ್ಷ ಹಾಗೂ ಐದು ತಿಂಗಳ ಕಾಲ ವಿಸ್ತರಿಸಿದೆ.

 ಈ ಹಿಂದೆ ಪಿಸ್ಟೋರಿಯಸ್‌ಗೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ‘ಸಹಾನುಭೂತಿ’ ಆಧಾರದಲ್ಲಿ ಕೇವಲ ಆರು ವರ್ಷಗಳ ಕಾಲ ಜೈಲು ಸಜೆ ವಿಧಿಸಿರುವುದು ಆಘಾತಕಾರಿ ವಿಷಯ ಎಂದು ಪ್ಯಾಸಿಕ್ಯೂಟರ್ ವಾದ ಮಂಡಿಸಿದ್ದರು. ಪ್ರಾಸಿಕ್ಯೂಟರ್ ವಾದವನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್ ಪಿಸ್ಟೋರಿಯಸ್ ವಿರುದ್ಧ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಿದೆ.

ಪಿಸ್ಟೋರಿಯಸ್ 2013ರಲ್ಲಿ ಪ್ರೇಮಿಗಳ ದಿನದಂದೇ ತನ್ನ ಪ್ರೇಯಸಿ ಸ್ಟೀವನ್‌ಕ್ಯಾಂಪ್‌ರನ್ನು ಗುಂಡಿಕ್ಕಿ ಸಾಯಿಸಿದ ಆರೋಪ ಎದುರಿಸುತ್ತಿದ್ದಾರೆ. ಈ ಪ್ರಕರಣ ಇಡೀ ವಿಶ್ವದ ಗಮನ ಸೆಳೆದಿತ್ತು.

 ಶುಕ್ರವಾರ ಕೋರ್ಟು ತೀರ್ಪು ನೀಡಿದಾಗ ಪಿಸ್ಟೋರಿಯಸ್ ಹಾಜರಾಗಿರಲಿಲ್ಲ. ದಕ್ಷಿಣ ಆಫ್ರಿಕದಲ್ಲಿ ಕೊಲೆ ಆರೋಪಿಗಳಿಗೆ ಕನಿಷ್ಠ 15 ವರ್ಷಗಳ ಶಿಕ್ಷೆ ನಿಗದಿಪಡಿಸಲಾಗಿದೆ. ಪಿಸ್ಟೋರಿಯಸ್ ಈಗಾಗಲೇ ಒಂದು ವರ್ಷ, ಆರು ತಿಂಗಳು ಜೈಲು ಸಜೆ ಅನುಭವಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News