ರಿಯಾದ್: ಕೆಸಿಎಫ್ ನಸೀಂ ಏರಿಯಾ ಘಟಕ ಅಸ್ತಿತ್ವಕ್ಕೆ

Update: 2017-11-25 07:20 GMT

ರಿಯಾದ್, ನ. 25: ಕರ್ನಾಟಕ ಕಲ್ಚರಲ್ ಫೌಂಡೇಶನ್ ರೌದ ಸೆಕ್ಟರ್ ವ್ಯಾಪ್ತಿಗೆ ಬರುವ ನಸೀಂ ಏರಿಯಾದಲ್ಲಿ ಇತ್ತೀಚೆಗೆ ಸಂಘಟನೆಯ ಘಟಕವನ್ನು ಅಸ್ತಿತ್ವಕ್ಕೆ ತರಲಾಯಿತು.

ಇಲ್ಲಿನ ಅಲೆಕ್ಕಾಡಿ ಹೌಸ್ ನಲ್ಲಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಹಲವು ಮಂದಿ ಅನಿವಾಸಿ ಕನ್ನಡಿಗರು ಪಾಲ್ಗೊಂಡಿದ್ದರು.

ರಿಯಾದ್ ಝೋನಲ್ ವ್ಯಾಪ್ತಿಯಲ್ಲಿ ಸಂಘಟನೆಗೆ ಈಗಾಗಲೇ ಸುಮಾರು ಹತ್ತು ಸೆಕ್ಟರ್  ಹಾಗೂ ಮೂರು  ಯೂನಿಟ್ ಘಟಕಗಳಿದ್ದು, ಇದೀಗ  ಸೆಕ್ಟರ್ ಗಳಿರುವ ಎಲ್ಲಾ ಕಡೆಗಳಲ್ಲಿ ಅಲ್ಲಿನ ಸ್ಥಳೀಯ ಕಾರ್ಯಕರ್ತರಿಗೆ ತಮ್ಮದೇ ಪ್ರದೇಶಗಳಲ್ಲಿ ಒಟ್ಟಗೂಡಲು ಅನುಗುಣವಾಗುವಂತೆ ಯೂನಿಟ್ ಗಳನ್ನು ರಚಿಸಲಾಗುತ್ತಿದೆ. ಈ ಪ್ರಕ್ರಿಯೆಯ ಅಂಗವಾಗಿ ನಡೆದ ಕಾರ್ಯಕ್ರಮವನ್ನು ರೌದಾ ಸೆಕ್ಟರ್ ಸ್ಥಾಪಕಾಧ್ಯಕ್ಷ ನಝೀರ್ ಮುಸ್ಲಿಯಾರ್ ನಂದಾವರ ಉದ್ಘಾಟಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆಸಿಎಫ್ ರಿಯಾದ್ ಝೋನ್ ಅಧ್ಯಕ್ಷ ಹನೀಫ್ ಬೆಳ್ಳಾರೆ "ಮಾನವ ಜನಾಂಗದ ಸೃಷ್ಟಿಯ ಹಿನ್ನಲೆಗೆ ಒಂದು ಮಹತ್ತರ ಗುರಿ ಹಾಗೂ ಧ್ಯೇಯವಿದ್ದು, ಆ ಧ್ಯೇಯವನ್ನು ಈಡೇರಿಸಲು ಅವರು ಒಕ್ಕೂಟಗಳನ್ನು ರಚಿಸಿಕೊಳ್ಳುವುದು ಅನಿವಾರ್ಯ. ಸಂಘಟನೆಗಳನ್ನು ರಚಿಸಿಕೊಳ್ಳುವುದು ಮತ್ತು ಅವುಗಳಲ್ಲಿ ಸದಸ್ಯತ್ವ ಪಡೆಯುವದರಿಂದ ಅನೇಕ ಲಾಭಗಳಿವೆ. ವಿದೇಶಗಳಲ್ಲಿ ಅನಿವಾಸಿಗಳಾಗಿದ್ದುಕೊಂಡು ದುಡಿಯು ತ್ತಿರುವರಿಗೆ ಆಪತ್ಕಾಲದಲ್ಲಿ ಇಂಥ ಸಂಘಟನೆಗಳು ನೆರವಿಗೆ ಬರುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಕೆಸಿಎಫ್ ಎಂಬ ಸಂಘಟನೆ ಇದೀಗ ಇಡೀ ಜಿಸಿಸಿ  ವಲಯದಲ್ಲಿ  ಒಂದು ಬೃಹತ್  ಕನ್ನಡಿಗ ವೇದಿಕೆಯಾಗಿ ರೂಪುಗೊಂಡಿದ್ದು ಅದು ತನ್ನ ಸದಸ್ಯರಲ್ಲಿ ಧಾರ್ಮಿಕ  ಹಾಗೂ ಸಾಮಾಜಿಕ ಕಳಕಳಿಯ ಚಿಂತನೆಗಳು ನಿರಂತರವಾಗಿರುವಂತೆ ನೋಡಿಕೊಳ್ಳುತ್ತದೆ"  ಎಂದರು.

ನವಂಬರ್ 9 ರಿಂದ ಆರಂಭಗೊಂಡು ಡಿಸೆಂಬರ್ ಅಂತ್ಯಕ್ಕೆ ಕೊನೆಗೊಳ್ಳುವ 'ಗಲ್ಫ್ ಇಶಾರಾ' ಅಭಿಯಾನ ಹಾಗೂ ಜನವರಿ ಮೊದಲ ಹಂತದಿಂದ ಆರಂಭಗೊಳ್ಳುವ ಎಮ್.ಆರ್.ಎಫ್ ( ಸದಸ್ಯರ ಸಾಂತ್ವನ ನಿಧಿ) ಅಭಿಯಾನಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ನೂತನವಾಗಿ ಸೇರ್ಪಡೆಗೊಂಡ ಸದಸ್ಯರಿಗೆ ಮನವಿ ಮಾಡಲಾಯಿತು.

ಚುನಾವಣಾ ವೀಕ್ಷಕರಾಗಿ ಆಗಮಿಸಿದ್ದ ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿ ಶಿಕ್ಷಣ ವಿಭಾಗದ ಅಧ್ಯಕ್ಷ ಅಬ್ದುಲ್ಲ ಸಖಾಫಿ  ನಿಂತಿಕಲ್ಲು ನೂತನ 'ನಸೀಂ ಯೂನಿಟ್' ಘೋಷಣೆ ನಡೆಸಿ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.

ನೂತನ ನಸೀಂ ಘಟಕದ ಅಧ್ಯಕ್ಷರಾಗಿ ಮುಹಮ್ಮದ್ ಮುಸ್ತಫಾ ಅಲೆಕ್ಕಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಇಖ್ಬಾಲ್‌ ಅಲೆಕ್ಕಾಡಿ, ಕೋಶಾಧಿಕಾರಿಯಾಗಿ ಖಿಲರ್ ಜಟ್ಟಿಪಳ್ಳ ಆಯ್ಕೆಯಾದರು. ಉಳಿದಂತೆ ಇತರ ಪದಾಧಿಕಾರಿಗಳಾಗಿ ಆದಂ ಮುಸ್ಲಿಯಾರ್ ಕಡಬ, ಅಶ್ರಫ್, ಜಿ.ಎಂ ಮುಚ್ಚಿಲ (ಉಪಾಧ್ಯಕ್ಷರುಗಳು) ಬಶೀರ್.ಜಿ , ಸಿನಾನ್ ಮಾಡಾವು ( ಜತೆ ಕಾರ್ಯದರ್ಶಿಗಳು) ಆರಿಫ್ ಜೋಕಟ್ಟೆ ,ಜಮಾಲ್ ಕೊಡಗು, ನಿಸಾರ್. ಕೆ.ಎಸ್ ಉಪ್ಪಿನಂಗಡಿ, ಮುಹಮ್ಮದ್ ಮಾಡಾವು, ಅಬ್ದುಲ್ಲ ಕುಂಞ ಸಂಪ್ಯ, ಮುಹಮ್ಮದ್ ಅಡ್ಯನಡ್ಕ (ಕಾರ್ಯಕಾರಿ ಸಮಿತಿ ಸದಸ್ಯರು) ಇವರನ್ನು ಆಯ್ಕೆ ಮಾಡಲಾಯಿತು.

ರೌದಾ ಸೆಕ್ಟರ್ ಅಧ್ಯಕ್ಷ ಅಬ್ದುಸ್ಸಲಾಂ ಹಳೆಯಂಗಡಿ, ಮಲಾಝ್ ಸೆಕ್ಟರ್ ಕಾರ್ಯದರ್ಶಿ ಝಹೀರ್ ಉಳ್ಳಾಲ್, ಶಿಫಾ ಸೆಕ್ಟರ್ ಸಂಘಟನಾ ವಿಭಾಗದ ಕಾರ್ಯದರ್ಶಿ ಹಂಝ ಅಜ್ಜಾವರ  ಸೇರಿದಂತೆ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಅಶ್ರಫ್ ಮುಸ್ಲಿಯಾರ್ ಮುಚ್ಚಿಲ ಖಿರಾಅತ್ ಪಡಿಸಿದರು.

ರೌದಾ ಸೆಕ್ಟರ್ ಕಾರ್ಯದರ್ಶಿ ರಿಯಾಝ್ ಮಲಾರ್ ಆರಂಭದಲ್ಲಿ ಸ್ವಾಗತಿಸಿದರು. ಶಿಫಾ ಸೆಕ್ಟರ್ ಕಾರ್ಯದರ್ಶಿ ಇಬ್ರಾಹಿಂ ಮುರ ಕಾರ್ಯಕ್ರಮ ನಿರೂಪಿಸಿ ದರು. ನೂತನ ಕಾರ್ಯದರ್ಶಿ ಇಕ್ಬಾಲ್ ಅಲೆಕ್ಕಾಡಿ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News