ಸಚಿನ್ ದಾಖಲೆ ಮುರಿದ ಸ್ಮಿತ್..!

Update: 2017-11-25 07:50 GMT

ಬ್ರಿಸ್ಬೇನ್, ನ.25: ಆಸ್ಟ್ರೇಲಿಯ ಕ್ರಿಕೆಟ್ ತಂಡದ ನಾಯಕ ಸ್ಟೀವ್ ಸ್ಮಿತ್ ಅವರು ಶನಿವಾರ ವೇಗವಾಗಿ 21 ಟೆಸ್ಟ್ ಶತಕಗಳನ್ನು ದಾಖಲಿಸಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ದಾಖಲೆಯನ್ನು ಮುರಿದಿದ್ದಾರೆ.
ಇಲ್ಲಿ ನಡೆಯುತ್ತಿರುವ ಆ್ಯಶಸ್ ಟೆಸ್ಟ್ ಸರಣಿಯ ಎರಡನೇ ಟೆಸ್ಟ್ ನಲ್ಲಿ ಸೊಗಸಾದ ಟೆಸ್ಟ್ ದಾಖಲಿಸುವ ಮೂಲಕ ಸಚಿನ್ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಸಚಿನ್ ತೆಂಡುಲ್ಕರ್ 110ನೇ ಇನಿಂಗ್ಸ್‌ನಲ್ಲಿ 21ನೇ ಶತಕ ದಾಖಲಿಸಿದ್ದರು. ಆದರೆ ಸ್ಮಿತ್ ಅವರು 105 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಸರ್ ಡಾನ್ ಬ್ರಾಡ್ಮನ್ 56 ಇನಿಂಗ್ಸ್ ಗಳಲ್ಲಿ ಮತ್ತು ಸುನೀಲ್ ಗವಾಸ್ಕರ್ 98 ನೇ ಇನಿಂಗ್ಸ್‌ನಲ್ಲಿ 21ನೇ ಶತಕ ಪೂರ್ಣಗೊಳಿಸಿದ್ದರು. ವೇಗವಾಗಿ 21 ಶತಕಗಳನ್ನು ದಾಖಲಿಸಿದ ಆಟಗಾರರ ಪೈಕಿ ಸ್ಮಿತ್ ಇದೀಗ 3ನೇ ಸ್ಥಾನ ಪಡೆದಿದ್ದಾರೆ.
ಸ್ಮಿತ್ ಅವರು ಎರಡನೇ ಟೆಸ್ಟ್‌ನಲ್ಲಿ ಶತಕ ದಾಖಲಿಸುವ ಮೂಲಕ ಏಕಾಂಗಿ ಹೋರಾಟ ನಡೆಸಿದರು. ಅಜೇಯ 141 ರನ್ ದಾಖಲಿಸಿ ತಂಡದ ಸ್ಕೋರ್‌ನ್ನು ಮೊದಲ ಇನಿಂಗ್ಸ್‌ನಲ್ಲಿ328ಕ್ಕೆ ಏರಿಸಿದರು. ಸ್ಮಿತ್  326 ಎಸೆತಗಳನ್ನು ಎದುರಿಸಿ 14 ಬೌಂಡರಿಗಳ ಸಹಾಯದಿಂದ 141 ರನ್ ಗಳಿಸಿದರು.ಇದರೊಂದಿಗೆ ಆಸ್ಟ್ರೇಲಿಯ 26 ರನ್‌ಗಳ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿತು.
ವೇಗವಾಗಿ 21 ಶತಕ ದಾಖಲಿಸಿದ ದಾಂಡಿಗರು
1.ಡಾನ್ ಬ್ರಾಡ್ಮನ್ 56 ಇನಿಂಗ್ಸ್
2.ಸುನೀಲ್ ಗವಾಸ್ಕರ್ 98 ಇನಿಂಗ್ಸ್

3.ಸ್ಟೀವ್ ಸ್ಮಿತ್ 105 ಇನಿಂಗ್ಸ್ 
4.ಸಚಿನ್ ತೆಂಡುಲ್ಕರ್ 110 ಇನಿಂಗ್ಸ್
5.ಮುಹಮ್ಮದ್ ಯೂಸುಫ್ 120 ಇನಿಂಗ್ಸ್ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News