ರಿಯಾದ್: 885 ವಲಸಿಗರ ಬಂಧನ

Update: 2017-11-25 17:00 GMT

ರಿಯಾದ್, ನ. 25: ಸೌದಿ ಅರೇಬಿಯದ ರಿಯಾದ್‌ನಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಸ್ಥಳೀಯ ನಿಯಮಾವಳಿಗಳನ್ನು ಉಲ್ಲಂಘಿಸಿದ ಆರೋಪದಲ್ಲಿ 24 ಗಂಟೆಯ ಅವಧಿಯಲ್ಲಿ 885 ವಲಸಿಗರನ್ನು ಬಂಧಿಸಿದ್ದಾರೆ.

ತನ್ನ ವಲಯದಲ್ಲಿ ಅಕ್ರಮವಾಗಿ ನೆಲೆಸಿರುವ ಎಲ್ಲ ವಿದೇಶಿ ಕೆಲಸಗಾರರನ್ನು ಬಂಧಿಸಲು ಭದ್ರತಾ ಸಂಸ್ಥೆಗಳಿಗೆ ಸೂಚನೆ ನೀಡುವ ಆದೇಶವೊಂದಕ್ಕೆ ಕಳೆದ ವಾರ ರಿಯಾದ್ ಗವರ್ನರ್ ರಾಜಕುಮಾರ ಫೈಸಲ್ ಬಿನ್ ಬಂಡರ್ ಸಹಿ ಹಾಕಿದ್ದರು.

ಬಂಧಿತರಲ್ಲಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರು ಮಂದಿ ಸೇರಿದ್ದಾರೆ.

ಸೌದಿ ಅರೇಬಿಯದ ಎಲ್ಲ ಭಾಗಗಳಲ್ಲಿ ಇಂಥದೇ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ.

ವಲಸಿಗರು ಹೊರಹೋಗುವಾಗ ತಮ್ಮೊಂದಿಗೆ ವಾಸ್ತವ್ಯ ಪ್ರಮಾಣಪತ್ರಗಳು, ಚಾಲನಾ ಪರವಾನಿಗೆಗಳು ಮತ್ತು ವಾಹನ ನೋಂದಣಿ ಪ್ರಮಾಣಪತ್ರಗಳನ್ನು ತೆಗೆದುಕೊಂಡು ಹೋಗುವಂತೆ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News