ಟಿಪ್ಪು ಸುಲ್ತಾನನ ರಾಜನೀತಿ

Update: 2017-11-25 18:09 GMT

ಟಿಪ್ಪು ಸುಲ್ತಾನನ ರಾಜನೀತಿಯಲ್ಲಿ ಬಹಳ ಪ್ರಮುಖ ವಾದುದು ಮತ್ತು ಗಮನ ಸೆಳೆಯುವುದು ತಂಬಾಕು ಮತ್ತು ಮದ್ಯ ನಿಷೇಧದ ಬಗ್ಗೆ ಆತನಿಗಿದ್ದ ಕಾಳಜಿ. ಆದೇಶ 19ರಲ್ಲಿ ಭಂಗಿ ಬೆಳೆಯುವುದನ್ನು ಟಿಪ್ಪು ನಿಷೇಧಿಸು ತ್ತಾನೆ. ಭಂಗಿ ಸೇದುವವರಿಗೆ ದಂಡ ವಿಧಿಸಬೇಕೆಂತಲೂ ಆದೇಶಿ ಸುತ್ತಾನೆ. ಹಿಂದಿನ ವರ್ಷದ ಕೃಷಿಯಿಂದ ಗಾಂಜಾ ಉಳಿದಿದ್ದರೆ ಅಥವಾ ಹೊರಗಿನಿಂದ ಆಮದು ಮಾಡಿ ಮಾರಿದರೆ ಅದರ ಮೇಲೆ ಕಳೆದ ವರ್ಷಕ್ಕಿಂತ ದುಪ್ಪಟ್ಟು ತೆರಿಗೆ ವಿಧಿಸಲಾಗುತ್ತದೆ. ಆದೇಶ 121ರಲ್ಲಿ ತಂಬಾಕು ಸೇದುವುದರಿಂದ ಆಗುವ ದುಷ್ಪರಿಣಾಮಗಳನ್ನು ಹೀಗೆ ವಿವರಿಸುತ್ತಾನೆ. ತಂಬಾಕು ಸೇದು ವುದರಿಂದ ಮೊದಲು ಹೃದಯ ಕಪ್ಪಗಾಗುತ್ತದೆ, ಆಮೇಲೆ ತುಟಿ ನಂತರ ನಾಲಗೆ ಕಪ್ಪಗಾಗುತ್ತದೆ. ಬಾಯಿ ಹುಣ್ಣಾಗುತ್ತದೆ. ಹಸಿವುಕಣ್ಮರೆಯಾಗಿ ಆರೋಗ್ಯ ಹದಗೆಡುತ್ತದೆ. ಆದ್ದರಿಂದ ತಂಬಾಕು ಸೇದುವುದು ಮತ್ತು ಜಗಿಯುವುದನ್ನು ನಿಷೇಧಿಸಲಾಗಿದೆ.

ಆದೇಶ 82ರಲ್ಲಿ ಎಲ್ಲಾ ಮದ್ಯ ವ್ಯಾಪಾರಿಗಳು ವ್ಯಾಪಾರ ವನ್ನು ಬಂದ್ ಮಾಡಿ ಪರ್ಯಾಯ ಉದ್ಯೋಗ ಹುಡುಕಿಕೊಳ್ಳ ಬೇಕು. ಇದನ್ನು ಯಾರಾದರೂ ವಿರೋಧಿಸಿದರೆ ಅವನ ಕೈಗಳನ್ನು ಕತ್ತರಿಸಿ ಮದ್ಯ ವ್ಯಾಪಾರ ಶಾಶ್ವತವಾಗಿ ಇಲ್ಲದಂತೆ ಮಾಡಬೇಕು ಎನ್ನುತ್ತಾನೆ.

ಆದೇಶ ಸಂಖ್ಯೆ 100ರಲ್ಲಿ ಟಿಪ್ಪು ವಿಶ್ರಾಂತಿ ಗೃಹಗಳಲ್ಲಿರುವ ಸಾಧುಗಳು ಭಂಗಿಯನ್ನು ಉಪಚಾರದ ಭಾಗವಾಗಿ ಬರುವ ಅತಿಥಿಗಳಿಗೆ ನೀಡುತ್ತಾರೆ. ಈ ಸಾಧುಗಳ ಸಂಗದಲ್ಲಿ ಅತಿಥಿಗಳು ತಂಬಾಕು ಮತ್ತು ಮದ್ಯ ಸೇವನೆಯಿಂದ ಹಾಳಾಗುತ್ತಿದ್ದಾರೆ. ವಿಶ್ರಾಂತಿ ಗೃಹದ ಮಾಲಕ ಈ ವಿಷಯವನ್ನು ಲಘುವಾಗಿ ಪರಿಗಣಿಸಬಾರದು. ಈ ಸಾಧುಗಳಿಗೆ ಎಚ್ಚರಿಕೆ ನೀಡಿ, ಅವರು ಮಾನ್ಯ ಮಾಡದಿದ್ದರೆ ರಾಜ್ಯದಿಂದ ಗಡಿಪಾರು ಮಾಡಿ ಎನ್ನುತ್ತಾನೆ.

ಟಿಪ್ಪು ಸುಲ್ತಾನನ ಈ ಆದೇಶದಿಂದ ಬೊಕ್ಕಸಕ್ಕೆ ಭಾರೀ ನಷ್ಟವಾ ಗುತ್ತದೆ ಎಂದು ಅವನ ಹಣಕಾಸು ಮಂತ್ರಿಯಾಗಿದ್ದ ಮೀರ್ ಸಾದಿಕ್ ಸುಲ್ತಾನನ ಗಮನಕ್ಕೆ ತರುತ್ತಾನೆ. ಆಗ ಟಿಪ್ಪು ಅವನಿ ಗೊಂದು ಪತ್ರವನ್ನು ಹೀಗೆ ಬರೆಯುತ್ತಾನೆ:

‘‘ಹಣಕಾಸಿನ ನಷ್ಟಕ್ಕೆ ಹೆದರಿ ನಾವು ಈ ನಿರ್ಧಾರದಿಂದ ಹಿಂದಕ್ಕೆ ಸರಿಯಬಾರದು. ಸಂಪೂರ್ಣ ನಿಷೇಧ ನನ್ನ ಹೃದಯಕ್ಕೆ ಹತ್ತಿರವಾದುದು. ಇದು ಕೇವಲ ಧರ್ಮದ ವಿಷಯ ಮಾತ್ರವಲ್ಲ.ನಾವು ನಮ್ಮ ಪ್ರಜೆಗಳ ಆರ್ಥಿಕ ಮತ್ತು ನೈತಿಕ ಕ್ಷಮತೆಯನ್ನು ಕಾಪಾಡಬೇಕು, ನಮ್ಮ ಯುವಕರ ನಡತೆಯನ್ನು ರೂಪಿಸಬೇಕು. ಬೊಕ್ಕಸಕ್ಕೆ ನಷ್ಟವಾಗುತ್ತದೆ ಎನ್ನುವ ನಿಮ್ಮ ಕಾಳಜಿಯನ್ನು ಮೆಚ್ಚು ತ್ತೇನೆ ಆದರೆ ನಾವು ಮುಂದಾಲೋಚನೆ ಮಾಡಬೇಕಲ್ಲವೇ? ನಮ್ಮ ಬೊಕ್ಕಸಕ್ಕೆ ಬರುವ ಲಾಭವು ನಮ್ಮ ಜನರ ಆರೋಗ್ಯ ಮತ್ತು ನೈತಿಕತೆಗಿಂತ ದೊಡ್ಡದೆಂದು ಭಾವಿಸಬೇಕೇ?’’

Similar News