ಸ್ನಾತಕ ಶುಲ್ಕ ಪಾವತಿಸಲು ದಿನಾಂಕ ವಿಸ್ತರಣೆ
Update: 2017-11-26 18:37 IST
ಬೆಂಗಳೂರು, ನ.26: ವಿದ್ಯಾರ್ಥಿ ಮತ್ತು ಪೋಷಕರ ಕೋರಿಕೆಯ ಮೇರೆಗೆ ಬೆಂಗಳೂರು ವಿಶ್ವವಿಶ್ವವಿದ್ಯಾಲಯದ ಕುಲಪತಿಗಳು ಸ್ನಾತಕ ಪರೀಕ್ಷೆಯ ಶುಲ್ಕ ಪಾವತಿಸುವ ದಿನಾಂಕವನ್ನು ವಿಶೇಷ ದಂಡ ಶುಲ್ಕದೊಂದಿಗೆ ನ.29 ರವರೆಗೆ ವಿಸ್ತರಿಸಲಾಗಿದೆ. ಹೀಗಾಗಿ, ಪ್ರಾಂಶುಪಾಲರು ಅರ್ಹ ವಿದ್ಯಾರ್ಥಿಗಳ ಅರ್ಜಿಯನ್ನು ಬೆಂಗಳೂರು ವಿವಿ ಹಣಕಾಸು ವಿಭಾಗದ ರಸೀದಿಯೊಂದಿಗೆ ಪರೀಕ್ಷಾ ವಿಭಾಗಕ್ಕೆ ತಲುಪಿಸಲು ಪ್ರಕಟನೆ ಸೂಚಿಸಿದೆ.