ಕಮರುದ್ದೀನ್
Update: 2017-11-26 21:33 IST
ಮಂಗಳೂರು, ನ. 26: ಉಳ್ಳಾಲ ಸುಂದರಿಬಾಗ್ ನಿವಾಸಿ ಕಮರುದ್ದೀನ್ (63) ರವಿವಾರ ಪೂರ್ವಾಹ್ನ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ನಿವೃತ್ತ ಸರಕಾರಿ ನೌಕರನಾಗಿದ್ದ ಮೃತರು ಪತ್ನಿ, ಪುತ್ರ ಮಂಜನಾಡಿ ಅಲ್ ಮದೀನಾ ದಅ್ವಾ ಕಾಲೇಜಿನ ಪ್ರಾಂಶುಪಾಲ ಮುನೀರ್ ಸಖಾಫಿ ಹಾಗೂ ಒಬ್ಬ ಪುತ್ರಿಯನ್ನು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಸೋಮವಾರ ತನ್ನ ಪತ್ನಿಯೊಂದಿಗೆ ಅವರು ಉಮ್ರಾ ಯಾತ್ರೆಯ ಸಿದ್ಧತೆಯಲ್ಲಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.