ರಣಜಿ ಟ್ರೋಫಿ: ರೈಲ್ವೇಸ್ ತಿರುಗೇಟು

Update: 2017-11-26 18:38 GMT

ಹೊಸದಿಲ್ಲಿ, ನ.26: ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ರೈಲ್ವೇಸ್ ತಂಡ ಮೊದಲ ಇನಿಂಗ್ಸ್‌ನಲ್ಲಿ ಸಾಧಾರಣ ಮೊತ್ತ ದಾಖಲಿಸಿದೆ.

  ಇಲ್ಲಿನ ಕರ್ನಲ್ ಸಿಂಗ್ ಸ್ಟೇಡಿಯಂನಲ್ಲಿ ರಣಜಿ ಪಂದ್ಯದ ಎರಡನೆ ದಿನದಾಟದಂತ್ಯಕ್ಕೆ ರೈಲ್ವೇಸ್ ಮೊದಲ ಇನಿಂಗ್ಸ್‌ನಲ್ಲಿ 65 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 241 ರನ್ ಗಳಿಸಿದೆ.

  70 ರನ್ ಗಳಿಸಿರುವ ಅರಿಂದಮ್ ಘೋಷ್, 86 ರನ್ ಗಳಿಸಿರುವ ನಾಯಕ ಮಹೇಶ್ ರಾವತ್ ತಂಡದ ಹೋರಾಟವನ್ನು ಮೂರನೇ ದಿನಕ್ಕೆ ಕಾಯ್ದಿರಿಸಿದ್ದಾರೆ. ಇವರು ಐದನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 158 ರನ್ ಸೇರಿಸಿದ್ದರಾರೆ.

ಅಭಿಮನ್ಯು ಮಿಥುನ್ (55ಕ್ಕೆ 2) ಮತ್ತು ಕೃಷ್ಣಪ್ಪ ಗೌತಮ್ (42ಕ್ಕೆ 2) ದಾಳಿಗೆ ಸಿಲುಕಿದ ರೈಲ್ವೇಸ್ ಒಂದು ಹಂತದಲ್ಲಿ 83ಕ್ಕೆ 4 ವಿಕೆಟ್ ಕಳೆದುಕೊಂಡಿತ್ತು. ಐದನೇ ವಿಕೆಟ್‌ಗೆ ಘೋಷ್ ಮತ್ತು ರಾವತ್ ಜೊತೆಯಾಗಿ ತಂಡವನ್ನು ಆಧರಿಸಿದರು.

ಕರ್ನಾಟಕ 89.2 ಓವರ್‌ಗಳಲ್ಲಿ 355/6

  ಮೊದಲ ದಿನದಾಟದಂತ್ಯಕ್ಕೆ 89.2 ಓವರ್‌ಗಳಲ್ಲಿ 6ವಿಕೆಟ್ ನಷ್ಟದಲ್ಲಿ 355 ರನ್ ಗಳಿಸಿದ್ದ ಕರ್ನಾಟಕ ತಂಡ ಈ ಮೊತ್ತಕ್ಕೆ 79 ರನ್ ಸೇರಿಸುವಷ್ಟರಲ್ಲಿ ಆಲೌಟಾಗಿದೆ. ಮೊದಲ ದಿನ ಔಟಾಗದೆ ಉಳಿದಿದ್ದ ವಿಕೆಟ್ ಕೀಪರ್ ಸಿಎಂ ಗೌತಮ್ 25 ರನ್, ಶ್ರೇಯಸ್ ಗೋಪಾಲ್ ಅಜೇಯ 44 ರನ್ ಮತ್ತು ಅಭಿಮನ್ಯು ಮಿಥುನ್ 31 ರನ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್ ವಿವರ

ಕರ್ನಾಟಕ 111 ಓವರ್‌ಗಳಲ್ಲಿ 434

 (ಮಾಯಾಂಕ್ ಅಗರವಾಲ್ 173, ಮನೀಷ್ ಪಾಂಡೆ 108; ಠಾಕೂರ್ 91ಕ್ಕೆ 3,ಮನೀಷ್ ರಾವ್ 96ಕ್ಕೆ 3).

►ರೈಲ್ವೇಸ್ ಮೊದಲ ಇನಿಂಗ್ಸ್ 65 ಓವರ್‌ಗಳಲ್ಲಿ 241/4

(ಅರಿಂದಮ್ ಘೋಷ್ ಔಟಾಗದೆ 70 , ಮಹೇಶ್ ರಾವತ್ ಔಟಾಗದೆ 86; ಗೌತಮ್ 42ಕ್ಕೆ 2 )

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News