ಹಾಜರಾತಿಗೆ 'ಜೈ ಹಿಂದ್' ಎಂದು ಉತ್ತರಿಸಿ: ವಿದ್ಯಾರ್ಥಿಗಳಿಗೆ ಮಧ್ಯಪ್ರದೇಶ ಸಚಿವರ ಸೂಚನೆ

Update: 2017-11-28 04:41 GMT
ಶಾಲಾ ಶಿಕ್ಷಣ ಸಚಿವ ವಿಜಯ್ ಶಹಾ

ಭೋಪಾಲ್, ನ. 28: ಭಾರತದಲ್ಲಿ ಮಮ್ಮಿ- ಡ್ಯಾಡಿ ಬದಲಾಗಿ ಮಾತಾ- ಪಿತಾ ಶಬ್ದವನ್ನು ಜನರು ಬಳಸಬೇಕು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಲಹೆ ನೀಡಿದ ಬೆನ್ನಲ್ಲೇ ರಾಜ್ಯದ ಸಚಿವರೊಬ್ಬರು ಹೊಸ ಫರ್ಮಾನು ಹೊರಡಿಸಿದ್ದಾರೆ.

ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕರೆದಾಗ, ವಿದ್ಯಾರ್ಥಿಗಳು ಜೈಹಿಂದ್ ಎಂದು ಉತ್ತರಿಸಬೇಕೆಂದು ಸೂಚನೆ ನೀಡಿದ್ದಾರೆ.

ಎನ್‌ಸಿಸಿ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಶಾಲಾ ಶಿಕ್ಷಣ ಸಚಿವ ವಿಜಯ್ ಶಹಾ "ವಿದ್ಯಾರ್ಥಿಗಳು ಪ್ರಸ್ತುತ ಬಳಸುವ "ಯೆಸ್ ಸಾರ್ ಅಥವಾ ಯೆಸ್ ಮೇಡಂ" ಬದಲಾಗಿ ಜೈಹಿಂದ್ ಎಂದು ಉತ್ತರಿಸಬೇಕೆಂದು ಹೇಳಿದರು.

ಇದನ್ನು ಎಲ್ಲ 1.22 ಲಕ್ಷ ಸರ್ಕಾರಿ ಶಾಲೆಗಳಲ್ಲಿ ಜಾರಿಗೊಳಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು. ಎಲ್ಲ ಖಾಸಗಿ ಶಾಲೆಗಳಿಗೆ ಕೂಡಾ ಇದನ್ನು ಪಾಲಿಸುವಂತೆ ಸಲಹೆ ನೀಡಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News