ಸೌದಿ: ಮಹಿಳಾ ಉದ್ಯಮಿಗಳ ಸಂಖ್ಯೆಯಲ್ಲಿ 35 ಶೇ. ಏರಿಕೆ

Update: 2017-11-28 16:48 GMT

ಜಿದ್ದಾ (ಸೌದಿ ಅರೇಬಿಯ), ನ. 28: ಸೌದಿ ಅರೇಬಿಯದಲ್ಲಿರುವ ಒಟ್ಟು ಉದ್ಯಮಿಗಳ ಪೈಕಿ ಮಹಿಳೆಯರ ಪಾಲು ಶೇ. 39 ಆಗಿದೆ ಎಂದು ‘ಅಲ್-ಇಕ್ತಿಸದಿಯ’ದ ರವಿವಾರದ ವರದಿಯೊಂದು ತಿಳಿಸಿದೆ. ಇದು ಕಳೆದ 10 ವರ್ಷಗಳ ಅವಧಿಯಲ್ಲಿ ದಾಖಲಾದ 35 ಶೇಕಡ ಏರಿಕೆಯಾಗಿದೆ.

 ವಿಶ್ವ ಉದ್ಯಮಶೀಲತಾ ದಿನದ ಅಂಗವಾಗಿ ಹೊರಡಿಸಲಾದ ಅಧಿಕೃತ ಅಂಕಿಅಂಶಗಳ ಪ್ರಕಾರ, 2007ರಿಂದ 2017ರ ಅವಧಿಯಲ್ಲಿ ಸೌದಿ ಮಹಿಳಾ ಉದ್ಯಮಿಗಳ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ, ಅಂದರೆ ಶೇ. 4ರಿಂದ ಶೇ. 39ಕ್ಕೆ ಏರಿಕೆಯಾಗಿದೆ.

ನವೆಂಬರ್ 25ರಂದು ಪ್ರಿನ್ಸ್ ಮುಹಮ್ಮದ್ ಬಿನ್ ಸಲ್ಮಾನ್ ಕಾಲೇಜ್ ಆಫ್ ಬಿಸ್ನೆಸ್ ಆ್ಯಂಡ್ ಆಂಟ್ರಪ್ರನರ್‌ಶಿಪ್ (ಎಂಬಿಎಸ್‌ಸಿ)ನಲ್ಲಿ ಅಂತಾರಾಷ್ಟ್ರೀಯ ಉದ್ಯಮಶೀಲತಾ ದಿನಾಚರಣೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News