ಯಮನ್: ನೆರವು ಸಾಮಗ್ರಿಗಳನ್ನು ಹೊತ್ತ ಹಡಗುಗಳ ಆಗಮನ

Update: 2017-11-28 16:34 GMT

ಪ್ಯಾರಿಸ್, ನ. 28: ಯುದ್ಧಪೀಡಿತ ಯಮನ್‌ಗೆ ನೆರವು ಸಾಮಗ್ರಿಗಳನ್ನು ಹೊತ್ತಿರುವ ಹಲವಾರು ಹಡಗುಗಳು ಆಗಮಿಸಿವೆ ಎಂದು ಯಮನ್‌ಗೆ ಸೌದಿ ಅರೇಬಿಯದ ರಾಯಭಾರಿ ಹೇಳಿದ್ದಾರೆ.

ಹೌದಿ ಬಂಡುಕೋರರಿಗೆ ಇರಾನ್‌ನಿಂದ ಶಸ್ತ್ರಗಳು ಬರುವುದನ್ನು ತಡೆಯಲು ಸೌದಿ ಅರೇಬಿಯ ನೇತೃತ್ವದ ಮಿತ್ರಕೂಟ ಈ ತಿಂಗಳ ಆರಂಭದಿಂದ ಯಮನ್‌ನ ಎಲ್ಲ ವಾಯು, ಭೂ ಮತ್ತು ಜಲ ಮಾರ್ಗಗಳನ್ನು ಮುಚ್ಚಿತ್ತು.

ಕಳೆದ ವಾರಾಂತ್ಯ ದಿಗ್ಬಂಧನೆಯನ್ನು ಕೊಂಚ ಸಡಿಲಿಸಲಾಗಿತ್ತು. 5,500 ಟನ್ ಹಿಟ್ಟು ಹೊತ್ತ ಹಡಗು ಯಮನ್‌ಗೆ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News