ಡಾ.ತುಂಬೆ ಮೊಯ್ದಿನ್ ರಿಗೆ ಬಿಸಿಎಫ್ ನಿಂದ 'ಗ್ಲೋಬಲ್ ಎಂಟರ್ ಪ್ರಿನರ್ ಅವಾರ್ಡ್'

Update: 2017-11-29 05:07 GMT

ದುಬೈ, ನ.29: ಕರ್ನಾಟಕದ ಖ್ಯಾತ ಅನಿವಾಸಿ ಉದ್ಯಮಿ, ಯುಎಇಯ ಅಜ್ಮಾನ್ ನಲ್ಲಿರುವ ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಸ್ಥಾಪಕ, ಶಿಕ್ಷಣ, ಆರೋಗ್ಯ, ಮೊದಲಾದ ರಂಗಗಳಲ್ಲಿ ಹೆಸರು ಗಳಿಸಿರುವ ಪ್ರತಿಷ್ಠಿತ ತುಂಬೆ ಸಮೂಹ ಸಂಸ್ಥೆಗಳ ಮಾಲಕ ಡಾ.ತುಂಬೆ ಮೊಯ್ದಿನ್ ಅವರನ್ನು ದುಬೈಯ  ಬ್ಯಾರೀಸ್ ಕಲ್ಚರಲ್ ಫೋರಂ (ಬಿಸಿಎಫ್) ಪ್ರತಿಷ್ಠಿತ 'ಗ್ಲೋಬಲ್ ಎಂಟರ್ ಪ್ರಿನರ್ ಅವಾರ್ಡ್' ಪ್ರಶಸ್ತಿ ನೀಡಿ ಗೌರವಿಸಿದೆ.

ಅಂತಾರಾಷ್ಟ್ರೀಯ ಗುಣಮಟ್ಟದ ಹಾಗೂ ತನ್ನ ಮೌಲ್ಯಾಧಾರಿತ ಸೇವೆಯಿಂದ ವಿಶ್ಯವ್ಯಾಪಿ ಜನಪ್ರಿಯವಾಗಿ ಬೆಳೆಯುತ್ತಿರುವ ಗಲ್ಫ್ ಮೆಡಿಕಲ್ ಯುನಿವರ್ಸಿಟಿ, ತುಂಬೆ ಹಾಸ್ಪಿಟಲ್ ಗ್ರೂಪ್ ಹಾಗೂ ಇತರ ಹಲವಾರು ಉದ್ದಿಮೆಗಳ ರೂವಾರಿಯಾಗಿರುವ ಡಾ.ತುಂಬೆ ಮೊಯ್ದಿನ್ ಹೆಸರಾಂತ ಯಶಸ್ವೀ  ಅನಿವಾಸಿ ಭಾರತೀಯ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ. ಫೋರ್ಬ್ಸ್ ಪ್ರಭಾವಿ ಉದ್ಯಮಿಗಳ ಪಟ್ಟಿಯಲ್ಲೂ ಅವರು ಪರಿಗಣಿಸಲ್ಪಟ್ಟಿದ್ದಾರೆ.

ಇತ್ತೀಚಿಗೆ ನಡೆದ ಗಲ್ಫ್ ಮೆಡಿಕಲ್ ಕಾಲೇಜಿನ ವೈದ್ಯಕೀಯ ಪದವಿ ಪ್ರಧಾನ ಸಮಾರಂಭದ ಸಂಧರ್ಭದಲ್ಲಿ ಬಿಸಿಫ್ ಅಧ್ಯಕ್ಷ ಡಾ.ಬಿ.ಕೆ.ಯೂಸುಫ್, ಪ್ರಧಾನ ಕಾರ್ಯದರ್ಶಿ ಡಾ.ಕಾಪು ಮುಹಮ್ಮದ್, ಉಪಾಧ್ಯಕ್ಷರಾದ ಎಂ.ಇ.ಮೂಳೂರು ಹಾಗೂ ಅಬ್ದುಲ್ ಲತೀಫ್ ಮುಲ್ಕಿ ಅವರು ಡಾ.ತುಂಬೆ ಮೊಯ್ದಿನ್ ರವರಿಗೆ ಪ್ರದಾನ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News