ಬಹರೈನ್ ಕೆ.ಸಿ.ಎಫ್.ನಿಂದ ಮೆಹಫಿಲೇ ಮುಸ್ತಫಾ(ಸ.) ಮೀಲಾದ್ ಕಾರ್ಯಕ್ರಮ

Update: 2017-11-29 10:36 GMT


ಬಹರೈನ್, ನ.29: ಕೆ.ಸಿ.ಎಫ್. ಬಹರೈನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಮೆಹಫಿಲೇ ಮುಸ್ತಫಾ(ಸ.) ಮೀಲಾದ್ ಸಮಾರಂಭ ಇತ್ತೀಚೆಗೆ ಮನಾಮದಲ್ಲಿ ನಡೆಯಿತು.

ಐ.ಸಿ.ಎಫ್. ಬಹರೈನ್ ಉಪಾಧ್ಯಕ್ಷ ಅಬೂಬಕರ್ ಲತೀಫಿ ಉಸ್ತಾದ್ ದುಆದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು.  ಐ.ಸಿ.ಎಫ್. ಉಪಾಧ್ಯಕ್ಷ ಝೈನುದ್ದೀನ್ ಸಖಾಫಿ ಉಸ್ತಾದ್  ಸಮಾರಂಭವನ್ನು ಉದ್ಘಾಟಿಸಿ  ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಫಾರೂಕ್ ಎಸ್.ಎಂ., ಬಹರೈನಿನಲ್ಲಿ ಅಹ್ಲುಸುನ್ನತ್ ವಲ್ ಮಾಹತಿನ ಕಾರ್ಯಾಚರಣೆಯನ್ನುಇನ್ನಷ್ಟು ಬಲಪಡಿಸಲು ಕೆ.ಸಿ.ಎಫ್ ನೊಂದಿಗೆ ಎಲ್ಲರೂ ಕೈ ಜೋಡಿಸಬೇಕೆಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಸೈಯದ್  ಹಾಶಿಮ್ ತಂಙಳ್ ಮಲಪ್ಪುರಂ, ರಫೀಕ್ ಸಅದಿ ದೇಲಂಪಾಡಿ ಮಾತನಾಡಿ ನಬಿದಿನದ ಮಹತ್ವವನ್ನು ವಿವರಿಸಿದರು. ಮಾಸ್ಟರ್ ಶಿಹಾನ್ ರಿಂದ  ನಅತೇ ಶರೀಫ್ ಆಲಾಪನೆ  ನಡೆಯಿತು.
 ಇದೇ ಸಂದರ್ಭ ಇತ್ತೀಚೆಗೆ  ನಡೆದ ಎರಡನೇ ಹಂತದ ಅಸ್ಸುಫಾ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ  ಪ್ರಶಸ್ತಿಗಳನ್ನು ಪತ್ರ ನೀಡಿ ಗೌರವಿಸಲಾಯಿತು. ಕೆ.ಸಿ.ಎಫ್. ಬಹರೈನ್ ಪಬ್ಲಿಕೇಷನ್ ವಿಭಾಗದ ವತಿಯಿಂದ 2018ನೆ ಸಾಲಿನ  ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.  
ಅಸ್ಸೈಯದ್ ಕೂರತ್ ತಂಙಳ್ ದುಆಗೈದರು.
ಮುಖ್ಯ ಅತಿಥಿಯಾಗಿ ಪುತ್ತೂರು ಎಸ್ಸೆಸ್ಸೆಫ್ ಡಿವಿಶನ್ ಅಧ್ಯಕ್ಷ ಶಾಕಿರ್ ಹಾಜಿ ಮಿತ್ತೂರು ಹಾಗೂ ಹಾರಿಸ್ ಕಣ್ಣೂರ್, ಬಹರೈನ್ ಉಲಮಾ ಒಕ್ಕೂಟದ ಪದಾಧಿಕಾರಿಗಳಾದ ಅಬ್ದುಲ್ ಮಜೀದ್ ಸಅದಿ ಪೆರ್ಲ, ಬಶೀರ್ ಸಅದಿ ನಾಳ, ಹೈದರ್ ಸಅದಿ ನೂಜಿ, ಸಿದ್ದೀಕ್ ಮುಸ್ಲಿಯಾರ್ ಮಂಜನಾಡಿ, ನೌಷಾದ್ ಮದನಿ ಉಳ್ಳಾಲ, ಅಹ್ಮದ್ ಮುಸ್ಲಿಯಾರ್ ಗಟ್ಟಮನೆ, ಕೆ.ಸಿ.ಎಫ್. ಅಂತಾರಾಷ್ಟ್ರೀಯ ಸಮಿತಿ/ ನೇತಾರರಾದ ಅಲಿ ಮುಸ್ಲಿಯಾರ್ ಕೊಡಗು, ಜಮಾಲುದ್ದೀನ್ ವಿಟ್ಲ, ಮೀಲಾದ್ ಸಮಿತಿಯ ಅಧ್ಯಕ್ಷ ಕಲಂದರ್ ಶರೀಫ್ ಕಕ್ಕೆಪದವು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಮುಂಚಿತವಾಗಿ ಕೆ.ಸಿ.ಎಫ್. ದಫ್ ಟೀಮ್ ವತಿಯಿಂದ ದಫ್ ಪ್ರದರ್ಶನ ನಡೆಯಿತು . 

ಕೆ.ಸಿ.ಎಫ್. ರಾಷ್ಟ್ರೀಯ ಸಮಿತಿ ಅಡ್ಮಿಸ್ಟ್ರೇಷನ್ ಚೈರ್ಮಾನ್ ಬಶೀರ್ ಕಾರ್ಲೆ ಕಾರ್ಯಕ್ರಮ ನಿರೂಪಿಸಿದರು. ಮಾಸ್ಟರ್ ದರ್ವೇಶ್ ಮುಹಮ್ಮದ್ ಅಲಿ ಕಿರಾಅತ್ ಪಠಿಸಿದರು. ಕೆ.ಸಿ.ಎಫ್.  ರಾಷ್ಟ್ರೀಯ  ಸಮಿತಿಯ  ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ ಸ್ವಾಗತ ಭಾಷಣ ಮಾಡಿದರು. ಮುಹಮ್ಮದ್ ಅಲಿ ಮುಸ್ಲಿಯಾರ್ ವೇಣೂರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News