×
Ad

ಕಳವು ಪ್ರಕರಣ: ಇಬ್ಬರ ಬಂಧನ

Update: 2017-11-29 19:23 IST

ಬೆಂಗಳೂರು, ನ.29: ಕಳವು ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿರುವ ಬಂಧಿಸಿರುವ ಕೊಡಿಗೇಹಳ್ಳಿ ಠಾಣಾ ಪೊಲೀಸರು 13.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕೊತ್ತನೂರಿನ ಸಾರಾಯಿ ಪಾಳ್ಯದ ಶೋಯಬ್(31), ಕೆಜಿಹಳ್ಳಿಯ ವಿನೋಬಾ ನಗರದ ಫೈರೋಝ್ (30) ಬಂಧಿತ ಆರೋಪಿಗಳು ಎಂದು ಪೊಲೀಸರು ಗುರುತಿಸಿದ್ದಾರೆ.

ತೆಲಂಗಾಣ ಮೂಲದ ಆರೋಪಿಗಳು ನಗರಕ್ಕೆ ಬಂದು ಬಾಡಿಗೆ ಮನೆ ಮಾಡಿಕೊಂಡು ಸಂಪಿಗೆಹಳ್ಳಿ, ವೈಯಾಲಿಕಾವಲ್, ಕೊಡಿಗೇಹಳ್ಳಿ ಇನ್ನಿತರ ಕಡೆಗಳಲ್ಲಿ ಕನ್ನಗಳವು ಮಾಡುತ್ತಿದ್ದರು. ಆಂಧ್ರದ ರಾಜೇಂದ್ರನಗರ, ಶಾಹಿದ್ ನಗರಗಳಲ್ಲೂ ಆರೋಪಿಗಳ ವಿರುದ್ಧ ಕಳವು ಪ್ರಕರಣ ದಾಖಲಾಗಿದೆ. ಈ ಇಬ್ಬರು ಜೈಲಿಗೆ ಹೋಗಿ ಬಂದಿರುವುದು ವಿಚಾರಣೆಯಲ್ಲಿ ಕಂಡು ಬಂದಿದೆ ಎಂದು ಡಿಸಿಪಿ ಗಿರೀಶ್ ಹೇಳಿದರು.

ಕಾರುಕಳವು: ಕಾರು, ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡುತ್ತಿದ್ದ ಯಲಹಂಕ ಉಪನಗರದ 4ನೆ ಹಂತದ ನಿರಂಜನ್ (33) ಎಂಬಾತನನ್ನು ಯಲಹಂಕ ಉಪನಗರ ಠಾಣಾ ಪೊಲೀಸರು ಬಂಧಿಸಿ, 15 ಗ್ರಾಂ ತೂಕದ ಚಿನ್ನ, 1 ಕೆಜಿ ಬೆಳ್ಳಿಯನ್ನು ವಶಕ್ಕೆ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News