×
Ad

ನಿಮ್ಮ ನೋವು-ನಲಿವುಗಳನ್ನು ಹಂಚಿಕೊಳ್ಳಲು ನನಗೆ ಪತ್ರ ಬರೆಯಿರಿ: ಕುಮಾರಸ್ವಾಮಿ

Update: 2017-11-30 19:28 IST

ಬೆಂಗಳೂರು, ನ.30: ‘ನಿಮ್ಮ ನೋವಿರಲಿ, ನಲಿವಿರಲಿ ಅಥವಾ ಯಾವುದೇ ಸಲಹೆ-ಸೂಚನೆಗಳು ಇದ್ದಲ್ಲಿ ನಾನು ನಿಮ್ಮಲ್ಲಿ ಒಬ್ಬನು ಎಂದು ಭಾವಿಸಿ ಪತ್ರದ ಮುಖಾಂತರ ಹಂಚಿಕೊಳ್ಳಿ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ತಾನು ರಾಜ್ಯ ಪ್ರವಾಸ ಕೈಗೊಳ್ಳುವ ಸಂದರ್ಭದಲ್ಲಿ ಹಲವು ಬಾರಿ ಜನರು ತಮ್ಮ ಭಾವನೆಗಳನ್ನು ನನ್ನ ಬಳಿ ಹಂಚಿಕೊಳ್ಳಲು ಪ್ರಯತ್ನಪಟ್ಟಿದ್ದನ್ನು ಗಮನಿಸಿದ್ದೇನೆ. ಆದರೆ, ಅತಿಯಾದ ಜನಜಂಗುಳಿ, ನೂಕುನುಗ್ಗಲಿನಲ್ಲಿ ಸಾಕಷ್ಟು ಜನರಿಗೆ ತಮ್ಮ ನೋವು-ನಲಿವುಗಳನ್ನು ಹಂಚಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ಭಾವನೆಗಳಿಗೂ ಸ್ಪಂದಿಸಬೇಕೆಂಬ ಹಂಬಲದಿಂದ ನಿಮ್ಮ ದೃಷ್ಟಿಕೋನ ಹಾಗೂ ಸಲಹೆ ಸೂಚನೆಗಳನ್ನು ಪತ್ರ ಮುಖೇನ ಬರೆದು ತಿಳಿಸಬಹುದು.

ನಿಮ್ಮ ಪತ್ರಗಳನ್ನು ಎಚ್.ಡಿ.ಕುಮಾರಸ್ವಾಮಿ, ರಂಕ ಎನ್‌ಕ್ಲೇವ್ ಅಪಾರ್ಟ್ಮೆಂಟ್, ನಂ.217, ಸರ್ ಸಿ.ವಿ.ರಾಮನ್ ರಸ್ತೆ, ಬೆಂಗಳೂರು-560080 ಈ ವಿಳಾಸಕ್ಕೆ ಕಳುಹಿಸಬಹುದು ಎಂದು ಪ್ರಕಟನೆಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News