ಎರಡನೇ ಆ್ಯಶಸ್ ಟೆಸ್ಟ್: ಅಲಿ ಆಡುವುದು ಅನುಮಾನ

Update: 2017-12-01 18:49 GMT

ಅಡಿಲೇಡ್, ಡಿ.1: ತೋರುಬೆರಳು ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಆಲ್‌ರೌಂಡರ್ ಮೊಯಿನ್ ಅಲಿ ಶನಿವಾರ ಆರಂಭವಾಗಲಿರುವ ಆಸ್ಟ್ರೇಲಿಯ ವಿರುದ್ಧದ ಎರಡನೇ ಆ್ಯಶಸ್ ಟೆಸ್ಟ್ ಪಂದ್ಯದಲ್ಲಿ ಆಡುವುದು ಅನುಮಾನ ಎಂದು ಇಂಗ್ಲೆಂಡ್ ನಾಯಕ ಜೋ ರೂಟ್ ಹೇಳಿದ್ದಾರೆ.

 ಮೊಯಿನ್ ಶುಕ್ರವಾರ ನಡೆದಿದ್ದ ತಂಡದ ನೆಟ್ ಅಭ್ಯಾಸದಲ್ಲಿ ಪಾಲ್ಗೊಂಡಿದ್ದು, ಅವರ ಹೆಸರನ್ನು 12 ಸದಸ್ಯರ ತಂಡದಲ್ಲಿ ಸೇರಿಸಲಾಗಿದೆ. ಹೊಸ ಮುಖ ಕ್ರೆಗ್ ಒವರ್ಟನ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಮೊದಲ ಟೆಸ್ಟ್‌ನ ಎರಡು ಇನಿಂಗ್ಸ್‌ನಲ್ಲಿ ಕೇವಲ 9 ರನ್ ಗಳಿಸಿರುವ ಮಾಜಿ ನಾಯಕ ಅಲಿಸ್ಟರ್ ಕುಕ್‌ರನ್ನು ಕೈಬಿಡುವುದಿಲ್ಲ ಎಂದು ರೂಟ್ ಸ್ಪಷ್ಟಪಡಿಸಿದರು.

‘‘ಕುಕ್ ವಿಶ್ವದರ್ಜೆಯ ಆಟಗಾರ. ಅವರು ಟೆಸ್ಟ್‌ನಲ್ಲಿ 11,000ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಕಳೆದ 10 ವರ್ಷಗಳಿಂದ ಅವರು ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಆ್ಯಶಸ್ ಸರಣಿಯಲ್ಲಿ ಅವರು ದೊಡ್ಡ ಕೊಡುಗೆ ನೀಡುವ ವಿಶ್ವಾಸ ನನಗಿದೆ’’ ಎಂದು ರೂಟ್ ಹೇಳಿದರು.

ಐದು ಪಂದ್ಯಗಳ ಆ್ಯಶಸ್ ಸರಣಿಯಲ್ಲಿ ಇಂಗ್ಲೆಂಡ್ 0-1 ಹಿನ್ನಡೆಯಲ್ಲಿದೆ. ಮೊದಲ ಬಾರಿ ಆ್ಯಶಸ್ ಸರಣಿಯಲ್ಲಿ ಹಗಲು-ರಾತ್ರಿ ನಡೆಯಲಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಉತ್ತಮ ಸಾಧನೆ ಮಾಡುವ ವಿಶ್ವಾಸದಲ್ಲಿದೆೆ.

ಇಂಗ್ಲೆಂಡ್ ತಂಡ: ಜೋ ರೂಟ್(ನಾಯಕ), ಮೊಯಿನ್ ಅಲಿ, ಜೇಮ್ಸ್ ಆ್ಯಂಡರ್ಸನ್, ಜಾನಿ ಬೈರ್‌ಸ್ಟೊವ್, ಜಾಕ್ ಬಾಲ್, ಸ್ಟುವರ್ಟ್ ಬ್ರಾಡ್, ಅಲಿಸ್ಟರ್ ಕುಕ್, ಡೇವಿಡ್ ಮಲಾನ್, ಕ್ರೆಗ್ ಒವರ್ಟನ್, ಮಾರ್ಕ್ ಸ್ಟೋನ್‌ಮನ್, ಜೇಮ್ಸ್ ವಿನ್ಸಿ ಹಾಗೂ ಕ್ರಿಸ್ ವೋಕ್ಸ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News