ಗಲ್ಫ್ ರಾಷ್ಟ್ರಗಳ ಶೃಂಗಸಭೆಗೆ ಕತರನ್ನು ಆಹ್ವಾನಿಸಿದ ಕುವೈತ್

Update: 2017-12-02 09:03 GMT

ದುಬೈ, ಡಿ.2: ಮುಂದಿನ ವಾರ ನಡೆಯಲಿರುವ ಗಲ್ಫ್ ರಾಷ್ಟ್ರಗಳ ಶೃಂಗಸಭೆಗೆ ಕುವೈತ್ ಕತರನ್ನು ಆಹ್ವಾನಿಸಿದೆ ಎಂದು gulfnews.com ವರದಿ ಮಾಡಿದೆ.

ಡಿಸೆಂಬರ್ 5 ಮತ್ತು 6ರಂದು ನಡೆಯಲಿರುವ ಗಲ್ಫ್ ಕಾರ್ಪೊರೇಷನ್ ಕೌನ್ಸಿಲ್ ಶೃಂಗಸಭೆಗೆ ಕುವೈತ್ ಕತರ್ ನ ಶೈಖ್ ತಮೀಮ್ ಬಿನ್ ಹಮದ್ ಅಲ್ ತಾನಿಯವರಿಗೆ ಆಮಂತ್ರಣ ನೀಡಿದೆ ಎಂದು ಕುವೈಟ್ ನ ‘ಕುನಾ ನ್ಯೂಸ್ ಏಜೆನ್ಸಿ’ ವರದಿ ಮಾಡಿದೆ.

ಜೂನ್ ನಲ್ಲಿ ಸೌದಿ ಅರೇಬಿಯಾ, ಬಹರೈನ್, ಯುಎಇ ಹಾಗು ಈಜಿಪ್ಟ್ ಕತರ್ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿತ್ತು.

1981ರಲ್ಲಿ ಸ್ಥಾಪನೆಯಾದ ಗಲ್ಫ್ ಕಾರ್ಪೊರೇಷನ್ ಕೌನ್ಸಿಲ್ ಸೌದಿ ಅರೇಬಿಯಾ, ಬಹರೈನ್, ಯುನೈಟೆಡ್ ಅರಬ್ ಎಮಿರೇಟ್ಸ್, ಕತರ್, ಕುವೈತ್ ಹಾಗು ಒಮಾನ್ ನ ರಾಜಕೀಯ ಹಾಗು ಆರ್ಥಿಕ ಒಕ್ಕೂಟವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News