×
Ad

ಉದ್ಯೋಗಿಗಳನ್ನು ಒಗ್ಗೂಡಿಸಿದ ‘ಕಾರ್ನಿವಾಲ್ ಉತ್ಸವ’

Update: 2017-12-03 20:29 IST

ಬೆಂಗಳೂರು, ಡಿ. 3: ಪ್ರಮುಖ ಮಾಹಿತಿ ತಂತ್ರಜ್ಞಾನ ಪಾರ್ಕ್ ಆದ ಇಂಟರ್‌ನ್ಯಾಷನಲ್ ಟೆಕ್‌ಪಾರ್ಕ್ ‘ಐಟಿಪಿಬಿ ಕಾರ್ನಿವಾಲ್’ ಉತ್ಸವ ಐಟಿ ಉದ್ಯೋಗಿಗಳು ಮತ್ತವರ ಕುಟುಂಬದ ಸದಸ್ಯರನ್ನು ಒಗ್ಗೂಡಿಸಿದಲ್ಲದೆ, ಅವರಲ್ಲಿನ ಒತ್ತಡ ನಿವಾರಣೆಗೆ ಸಹಕಾರಿಯಾಯಿತು.

ಉದ್ಯೋಗಿಗಳು ಮತ್ತು ಮಕ್ಕಳ ಮನರಂಜನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಫುಡ್ ಟ್ರಕ್‌ಗಳು, ಫೀ ಮಾರ್ಕೆಟ್ ಸ್ಟಾಲ್‌ಗಳು, ಐಟಿಪಿಬಿ ಒಳಗಿನ ಪ್ರತಿಭೆಗಳಿಂದ ರೋಮಾಂಚಕ ಪ್ರದರ್ಶನಗಳು, ವರ್ಣಮಯ ಉತ್ಸವ ಮತ್ತು ಸಾಹಸದ ಆಟಗಳು ಇಲ್ಲಿದ್ದು ತಮ್ಮ ಪ್ರೀತಿಪಾತ್ರರೊಂದಿಗೆ ಉದ್ಯೋಗಿಗಳು ದಿನವನ್ನು ಕಳೆದರು.

ಗಾಯಕ ಲಕ್ಕಿ ಅಲಿ ಅವರಿಂದ ವೇದಿಕೆಯಲ್ಲಿ ಪ್ರದರ್ಶನ, ಶರವಣ ಧನಪಾಲ್ ಅವರಿಂದ ಸ್ಟೇಜ್ ಶೋ ಮತ್ತು ಟೀಮ್-5678 ರಿಂದ ನೃತ್ಯ ಪ್ರದರ್ಶನಗಳು ದಿನವೆಲ್ಲಾ ನೆರೆದಿದ್ದ ಪ್ರೇಕ್ಷಕರಿಗೆ ಮನರಂಜನೆ ನೀಡಿತ್ತು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜಯ್ ದತ್ ಮಾತನಾಡಿ, ‘ಇಲ್ಲಿನ ಉದ್ಯೋಗಿಗಳು ತಮ್ಮ ಕುಟುಂಬದವರೊಂದಿಗೆ ಆರಾಮವಾಗಿ ತಮ್ಮ ನೆಚ್ಚಿನ ಕಾರ್ಯಸ್ಥಳದಲ್ಲಿ ಕಾಲ ಕಳೆಯಲು ಕಾರ್ನಿವಾಲ್ ಒಂದು ಅದ್ಭುತ ವೇದಿಕೆ’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News