ಜಾನಪದ ಕಲೆಗಳಿಗೆ ಪ್ರೋತ್ಸಾಹ ಬೇಕಿದೆ

Update: 2017-12-03 18:59 GMT

ಮಾನ್ಯರೆ,

ಮನುಷ್ಯ ಹುಟ್ಟಿನೊಂದಿಗೆ ಜನ್ಮ ತಾಳಿದ ನಮ್ಮ ಭಾರತೀಯ ಜಾನಪದ ಪರಂಪರೆಯು ಧರ್ಮ, ಸಂಸ್ಕೃತಿ, ಕಲೆ, ಸಾಹಿತ್ಯ ಹೀಗೆ ಹಲವು ಕ್ಷೇತ್ರಗಳಲ್ಲಿ ಪ್ರತಿನಿಧಿಸಿ ಸಮಾಜದ ಆಚರಣೆಗಳೊಂದಿಗೆ ಬೆಸೆದುಕೊಂಡಿದೆ. ನಾಡು ನುಡಿ ಮತ್ತು ವ್ಯಕ್ತಿಯ ವ್ಯಕ್ತಿತ್ವವನ್ನು ತಿಳಿಹೇಳುವುದರ ಜೊತೆಗೆ ಸಮುದಾಯಗಳ ಸಹಬಾಳ್ವೆಗೆ ಸಹಕಾರಿಯಾಗಿದೆ. ಅಲ್ಲದೆ ಜನರ ನಡುವೆ ಪರಸ್ಪರ ಪ್ರೀತಿ, ವಿಶ್ವಾಸ ಹೆಚ್ಚಿಸಿ ಸಮಾನತೆ ಮತ್ತು ಸಹೋದರತ್ವದ ಭಾವನಾತ್ಮಕ ಸಂಬಂಧಗಳನ್ನು ಗಟ್ಟಿಗೊಳಿಸಿ ವೈಚಾರಿಕ ಜೀವನದಡೆಗೆ ಕೊಂಡೊಯ್ಯುವ ಶಕ್ತಿ ಈ ಜಾನಪದ ಪರಂಪರೆಗಿದೆ.

ಆದರೆ ಇತ್ತೀಚೆಗೆ ಭಾರತೀಯರಲ್ಲಿ ಹೆಚ್ಚುತ್ತಿರುವ ಪಾಶ್ಚಾತ್ಯ ಕಲೆಗಳ ಆಕರ್ಷಣೆಯಿಂದ ಹಾಗೂ ಆಧುನಿಕ ಮಾಧ್ಯಮಗಳ ಪ್ರಭಾವದಿಂದಾಗಿ 30 ಸಾವಿರಕ್ಕೂ ಅಧಿಕ ಕಲೆಗಳನ್ನು ಹೊಂದಿರುವ ಜನಪದ ಸಂಸ್ಕೃತಿ ಇಂದು ಅವನತಿಯ ಅಂಚಿಗೆ ಬಂದು ತಪಲುಪಿದೆ. ಆದ್ದರಿಂದ ನಮ್ಮ ಭಾರತೀಯ ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸಲು ಸರಕಾರ ಜಾನಪದೀಯ ಕಲೆಗಳನ್ನು ಪ್ರೋತ್ಸಾಹಿಸಬೇಕು. ಅಲ್ಲದೆ ಪಠ್ಯಪುಸ್ತಕಗಳಲ್ಲಿ ಜಾನಪದ ಕುರಿತು ವಿಷಯ ಅಳವಡಿಸಿ ಮಕ್ಕಳಿಗೆ ಜಾನಪದ ಸಂಸ್ಕೃತಿಯ ಬಗ್ಗೆ ತಿಳಿಸಬೇಕು. ಅಲ್ಲದೆ ಪ್ರತೀ ವರ್ಷವೂ ಜಾನಪದ ಉತ್ಸವಗಳು ಮತ್ತು ಸಮ್ಮೇಳನಗಳನ್ನು ಆಯೋಜಿಸಿ ಭಾರತೀಯ ಜಾನಪದದ ಸಾಂಸ್ಕೃತಿಕ ಹಿರಿಮೆ ಹೆಚ್ಚಿಸಬೇಕು. ಈ ಕುರಿತು ಸರಕಾರ ಗಂಭೀರವಾಗಿ ಚಿಂತಿಸಲಿ.

Writer - -ಮೌಲಾಲಿ ಕೆ ಬೋರಗಿ, ಸಿಂದಗಿ

contributor

Editor - -ಮೌಲಾಲಿ ಕೆ ಬೋರಗಿ, ಸಿಂದಗಿ

contributor

Similar News