ಯುಎಇ 46ನೆ ರಾಷ್ಟ್ರೀಯ ದಿನಾಚರಣೆ: ಬಿಡಬ್ಲ್ಯುಎಫ್ ನಿಂದ ವಿಶೇಷ ಕಾರ್ಯಕ್ರಮ

Update: 2017-12-05 13:03 GMT

ಅಬುದಾಭಿ, ಡಿ.5: ಯುಎಇಯ 46ನೆ ರಾಷ್ಟ್ರೀಯ ದಿನಾಚರಣೆಯ ಅಂಗವಾಗಿ ಅಬುದಾಭಿಯ ಬ್ಯಾರೀಸ್ ವೆಲ್ಫೇರ್ ಫೋರಂ (ಬಿಡಬ್ಲ್ಯುಎಫ್) ಇತ್ತೀಚೆಗೆ ದುಬೈನ ಝಬೀಲ್ ಪಾರ್ಕ್‌ನಲ್ಲಿ ಉಪನ್ಯಾಸ ಹಾಗೂ ಪಿಕ್‌ನಿಕ್ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು.

ಹಂಝಲ್ ಮೊಹಿದಿನ್‌ರ ಕಿರಾಅತ್ ಪಠಣದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಬಿಡಬ್ಲ್ಯುಎಫ್ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಸ್ವಾಗತಿಸಿದರು. ಕರ್ನಾಟಕ ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭಕೋರಿದರು.

ಕಾರ್ಯಕ್ರಮದಲ್ಲಿ ಕ್ವಿಝ್, ಆಟೋಟ ಸ್ಪರ್ಧೆಗಳು ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಅಬ್ದುಲ್ಲಾ ಮದುಮೂಲೆ, ಹಂಝ ಖಾದರ್, ರಫೀಕ್ ಕೃಷ್ಣಾಪುರ, ಮುಹಮ್ಮದ್ ಸಿದ್ದೀಕ್ ಕಾಪು, ಇಮ್ರಾನ್ ಅಹ್ಮದ್, ನವಾಝ್ ಉಚ್ಚಿಲ್ ಮುಜೀಬ್ ಉಚ್ಚಿಲ್, ಮುಹಮ್ಮದ್ ಕಲ್ಲಾಪು, ರಶೀದ್ ವಿ.ಕೆ. ಹಾಗೂ ಅಬ್ದುಲ್ ರವೂಫ್ ಭಾಗವಹಿಸಿದ್ದರು.

ಸಿದ್ದೀಕ್ ಉಚ್ಚಿಲ್, ಹಮೀದ್ ಗುರುಪುರ, ರಶೀದ್ ಬಿಜೈ, ನಝೀರ್ ಉಬಾರ್, ಅಬ್ದುಲ್ ಮಜೀದ್, ಬಶೀರ್ ಬಜ್ಪೆ, ಹನೀಫ್ ಉಳ್ಳಾಲ, ಮಜೀದ್ ಆತೂರ್, ಮುಹಿಯುದ್ದೀನ್ ಹಂಡೇಲ್, ಅಬ್ದುಲ್ ಸಲೀಂ, ಅಲ್ತಾಫ್, ಅಬೂಬಕರ್ ಸೇರಿದಂತೆ ಬಿಡಬ್ಲ್ಯುಎಫ್ ಪದಾಧಿಕಾರಿಗಳು ಸಹಕರಿಸಿದರು. ಬಿಡಬ್ಲ್ಯುಎಫ್ ಮಹಿಳಾ ವಿಭಾಗದ ಸದಸ್ಯೆಯರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News