ಡಿ. 8: ಕೆಸಿಎಫ್ ದುಬೈ ನಾರ್ತ್ ಝೋನ್ ವತಿಯಿಂದ ಮೀಲಾದ್ ಸಮಾವೇಶ

Update: 2017-12-05 12:00 GMT

ದುಬೈ, ಡಿ. 5: ಕನ್ನಡಿಗ ಪ್ರವಾಸಿಗಳ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ದುಬೈ ನಾರ್ತ್ ಝೋನ್ ದೇರಾ ನಗರದ  ಪರ್ಲ್ ಕ್ರೀಕ್ ಹೋಟೆಲ್ ಸಭಾಂಗಣದಲ್ಲಿ ಡಿ. 8ರಂದು ಸಂಜೆ 6️ ರಿಂದ 11 ತನಕ 'ಸಹಿಷ್ಟುತೆಯ ಸಂದೇಶ ವಾಹಕ' ಎಂಬ ಘೋಷ  ವಾಕ್ಯದೊಂದಿಗೆ ಮೀಲಾದ್ ಸಮಾವೇಶ  ನಡೆಯಲಿದೆ.

ಕೆಸಿಎಫ್ ನಾರ್ತ್ ಝೋನ್ ವತಿಯಿಂದ ನಡೆಯಲಿರುವ ಮೀಲಾದ್ ಸಮಾವೇಶದ ಪತ್ರಿಕಾ ಗೋಷ್ಠಿ ಇತ್ತೀಚಿಗೆ ಪರ್ಲ್ ಕ್ರೀಕ್ ಹೋಟೆಲ್ ಸಭಾಂಗಣದಲ್ಲಿ ನಡೆಯಿತ್ತು.

ಕಾರ್ಯಕ್ರಮದಲ್ಲಿ ಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರತ್, ದಾರುಲ್ ಆಶ್ ಆರಿಯ ಜನರಲ್ ಮೆನೇಜರ್  ಮುಹಮ್ಮದ್ ಅಲಿ ಸಖಾಫಿ, ಕರ್ನಾಟಕ ಎಸ್ ವೈ ಎಸ್  ರಾಜ್ಯಾಧ್ಯಕ್ಷ ಜಿ ಎಂ ಮುಹಮ್ಮದ್ ಕಾಮಿಲ್ ಸಖಾಫಿ, ದುಬೈ ಅರಬ್ ಪೌರರು ಸಮೇತ ಸಾಮಾಜಿಕ, ಧಾರ್ಮಿಕ ರಂಗದ ಗಣ್ಯರು ಭಾಗವಹಿಸಲಿದ್ದಾರೆ ಹಾಗು  ಕಾರ್ಯಕ್ರಮದಲ್ಲಿ ವಿಶೇಷ ತರಬೇತಿ ಹೊಂದಿದ ತಂಡದಿಂದ ಬುರ್ದಾ ಆಲಾಪನೆಯು ನಡೆಯಲಿದೆ ಎಂದು ಮೀಲಾದ್ ಸ್ವಾಗತ ಸಮಿತಿ ಚೆಯರ್ಮ್ಯಾನ್ ಅಶ್ರಫ್ ಹಾಜಿ  ಅಡ್ಯಾರ್ ತಿಳಿಸಿದರು.  

ಪತ್ರಿಕಾ ಗೋಷ್ಠಿಯಲ್ಲಿ ಝೋನ್ ಪ್ರೆಸಿಡೆಂಟ್ ಅಬ್ದುಲ್ಲಾ ಮುಸ್ಲಿಯಾರ್ ಕುಡ್ತಮೊಗೇರು, ಸಂಘಟನಾ ವಿಭಾಗದ ಚೆಯರ್ಮ್ಯಾನ್ ಅಬ್ದುಲ್ ಅಝೀಝ್ ಲತೀಫಿ,  ಕೆಸಿಎಫ್  ನ್ಯಾಷನಲ್  ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಾಜೂರ್, ಹಾಜಿ ಮೂಸ ಬಸರ, ಸ್ವಾಗತ ಸಮಿತಿ ಜನರಲ್ ಕನ್ವಿನರ್ ಹಾಜಿ ನವಾಝ್ ಕೋಟೆಕ್ಕಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News