ಪ್ರತಿಷ್ಠಿತ ಟೈಮ್ ಮ್ಯಾಗಝಿನ್ ಓದುಗರ ಸಮೀಕ್ಷೆ: 'ವರ್ಷದ ವ್ಯಕ್ತಿ'ಯಾಗಿ ಸೌದಿ ರಾಜಕುಮಾರ ಆಯ್ಕೆ

Update: 2017-12-06 09:04 GMT

ಲಂಡನ್, ಡಿ.6: ಪ್ರತಿಷ್ಠಿತ 'ಟೈಮ್ ಮ್ಯಾಗಝಿನ್' ಓದುಗರ ಸಮೀಕ್ಷೆಯಲ್ಲಿ ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ 'ವರ್ಷದ ವ್ಯಕ್ತಿ 2017' ಆಗಿ ಆಯ್ಕೆಯಾಗಿದ್ದಾರೆ. ಮುಹಮ್ಮದ್ ಬಿನ್ ಸಲ್ಮಾನ್ ಅವರು ಶೇ.24ರಷ್ಟು ಜನರ ಮತಗಳನ್ನು ಈ ಪಟ್ಟಿಯಲ್ಲಿನ ಪ್ರಮುಖರ ಪೈಕಿ ಅಗ್ರಸ್ಥಾನಿಯಾಗಿದ್ದಾರೆ.

ಸೌದಿ ಅರೇಬಿಯಾದಲ್ಲಿ ರಾಜಕೀಯ ಮತ್ತು ಆರ್ಥಿಕ ಸುಧಾರಣೆಗಳಲ್ಲಿ ಹಲವು ಮಾರ್ಪಾಡುಗಳನ್ನು ಮಾಡಿರುವ ಮುಹಮ್ಮದ್ ಬಿನ್ ಸಲ್ಮಾನ್ ಈಗಾಗಲೇ ಜಗತ್ತಿನಾದ್ಯಂತ ಸುದ್ದಿಯಾಗಿದ್ದಾರೆ. ಮಹಿಳೆಯರಿಗೆ ವಾಹನ ಚಲಾವಣೆಗೆ ಅವಕಾಶ, ಭ್ರಷ್ಟಾಚಾರಕ್ಕೆ ಕಡಿವಾಣ ಸೇರಿದಂತೆ ಹಲವು ಬದಲಾವಣೆಗಳಿಂದ ಅವರು ಜನಪ್ರಿಯರಾಗಿದ್ದಾರೆ.

ಈ ವರ್ಷ ಟೈಮ್ಸ್ ಮ್ಯಾಗಝಿನ್ ಓದುಗರ ಸಮೀಕ್ಷೆಯ ವರ್ಷದ ವ್ಯಕ್ತಿ ಆಯ್ಕೆಗೆ 33 ಮಂದಿ ಕಣದಲ್ಲಿದ್ದರು. ಖ್ಯಾತನಾಮರಾದ ಹಿಲರಿ ಕ್ಲಿಂಟನ್, ವ್ಲಾದಿಮಿರ್ ಪುಟಿನ್ ಹಾಗೂ ಪೋಪ್ ಅವರನ್ನೂ ಸೌದಿ ರಾಜಕುಮಾರ ಹಿಂದಿಕ್ಕಿದ್ದಾರೆ. ಈ ಹಿಂದೆ ಟೈಮ್ ವರ್ಷದ ವ್ಯಕ್ತಿಯಾಗಿ ಯಾಸರ್ ಅರಾಫತ್ (1933) ಗಾಂಧೀಜಿ (1930) ವಿನ್‍ಸ್ಟನ್ ಚರ್ಚಿಲ್ (1930 ಹಾಗೂ 1940) ಸೇರಿದಂತೆ ಹಲವು ದಿಗ್ಗಜರು ಆಯ್ಕೆಯಾಗಿದ್ದರು.

ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು  ಸ್ಪರ್ಧಾಕಣದಲ್ಲಿ 11 ಬಾರಿ ಕಾಣಿಸಿಕೊಂಡಿದ್ದರೂ 2008 ಹಾಗೂ 2012ರಲ್ಲಿ ವರ್ಷದ ವ್ಯಕ್ತಿಯಾಗಿ ಆಯ್ಕೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News