×
Ad

ಯುವಕರ ಮೇಲೆ ಹಲ್ಲೆ ಆರೋಪ: ಬಿಬಿಎಂಪಿ ಬಿಜೆಪಿ ಸದಸ್ಯೆಯ ಪತಿ ಸೇರಿ 8 ಜನರ ಬಂಧನ

Update: 2017-12-06 21:44 IST

 ಬೆಂಗಳೂರು, ಡಿ.6: ಸಂಘಟನೆಯೊಂದಕ್ಕೆ ಸೇರಿದ ಜಾಗದಲ್ಲಿ ಕ್ರಿಕೆಟ್ ಆಡುತ್ತಿದ್ದ ಯುವಕರ ಗುಂಪಿನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಿಬಿಎಂಪಿಯ ಸಾರಕ್ಕಿ ವಾರ್ಡ್‌ನ ಬಿಜೆಪಿ ಸದಸ್ಯೆಯ ಪತಿ ಸೇರಿ 8 ಜನರನ್ನು ಇಲ್ಲಿನ ಜೆ.ಪಿ.ನಗರ ಪೊಲೀಸರು ಬಂಧಿಸಿದ್ದಾರೆ.

 ಸಾರಕ್ಕಿ ವಾರ್ಡ್ ಸದಸ್ಯೆ ದೀಪಿಕಾ ಪತಿ ಮಂಜುನಾಥ್ ರೆಡ್ಡಿ ಹಾಗೂ ಆತನ ಬೆಂಬಲಿಗರನ್ನು ಬಂಧಿಸಿರುವ ಪೊಲೀಸರು ಹಲ್ಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ.ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.

 ಸಾಂಸ್ಕೃತಿಕ ಹಾಗೂ ಕ್ಷೇಮಾಭಿವೃದ್ಧಿ ಸಂಘಕ್ಕೆ ಸೇರಿದ ಕಟ್ಟಡದ ಹೊರಾಂಗಣ ಖಾಲಿ ಜಾಗದಲ್ಲಿ ಕಾರಾಗೃಹ ಇಲಾಖೆಯ ನಿವೃತ್ತ ಡಿಜಿಪಿ ಎಚ್.ಎಸ್.ಸತ್ಯನಾರಾಯಣರಾವ್ ಪುತ್ರ ಸೇರಿ ಸ್‌ಟಾವೇರ್ ಕಂಪೆನಿವೊಂದರಲ್ಲಿ ಕೆಲಸ ಮಾಡುವ ಹತ್ತು ಜನ ಟೆಕ್ಕಿಗಳು ಮಂಗಳವಾರ ಸಂಜೆ ಕ್ರಿಕೆಟ್ ಆಡಲು ಬಂದಿದ್ದರು. ಈ ವೇಳೆ ಕಾರ್ಪೋರೇಟರ್ ಪತಿ ಮಂಜುನಾಥ್ ರೆಡ್ಡಿ ಹಾಗೂ ಆತನ ಸಹಚರರು ಸ್ಥಳಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಈ ಜಾಗದಲ್ಲಿ ಕ್ರಿಕೆಟ್ ಆಡಬೇಡಿ ಎಂದು ತಾಕೀತು ಮಾಡಿದ್ದು, ಇದಕ್ಕೆ ಟೆಕ್ಕಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎರಡು ಗುಂಪಿನ ನಡುವೆ ಮಾತಿನ ಚಕಮಕಿ ಉಂಟಾಗಿದೆ. ಈ ವೇಳೆ ಮಂಜುನಾಥ್ ರೆಡ್ಡಿ ಆತನ ಬೆಂಬಲಿಗರು ಹಲ್ಲೆ ಮಾಡಿರುವುದಾಗಿ ಸೈಯದ್ ಸಲ್ಮಾನ್ ಎಂಬುವವರು ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News