×
Ad

ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ: ಆರೋಪಿಗೆ 20 ವರ್ಷ ಜೈಲು ವಿಧಿಸಿದ ಸಿಟಿ ಸಿವಿಲ್ ಕೋರ್ಟ್

Update: 2017-12-06 21:52 IST

 ಬೆಂಗಳೂರು, ಡಿ.6: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ನಗರದ ಸಿಟಿ ಸಿವಿಲ್ ಕೋರ್ಟ್ 20 ವರ್ಷ ಜೈಲು ಮತ್ತು 55 ಸಾವಿರ ದಂಡ ವಿಧಿಸಿ ಶಿಕ್ಷೆ ಪ್ರಕಟಿಸಿದೆ.

ಶರವಣ ಜೈಲು ಶಿಕ್ಷೆಗೆ ಗುರಿಯಾಗಿರುವ ಅಪರಾಧಿ. ಈತ 2014 ರ ಅಕ್ಟೋಬರ್ 14 ರಂದು ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ. ಅಪರಾಧಿ ಶರವಣ ಚಾಕಲೇಟ್ ಕೊಡಿಸುವುದಾಗಿ ಪುಸಲಾಯಿಸಿದ್ದ. ಬಳಿಕ ತನ್ನ ಮನೆಯಲ್ಲಿ ಅಪ್ರಾಪ್ತೆಯನ್ನು ಕೂಡಿ ಹಾಕಿ ಅತ್ಯಾಚಾರವೆಸಗಿದ್ದ.

ಇನ್ನು ಕೃತ್ಯವೆಸಗಿದ ಬಳಿಕ ಅತ್ಯಾಚಾರವೆಸಗಿರೋದನ್ನು ಬಾಯ್ಬಿಟ್ಟರೆ ಕೊಲ್ಲೋದಾಗಿ ಬಾಲಕಿಗೆ ಧಮ್ಕಿ ಹಾಕಿದ್ದ ಅಪರಾಧಿ ಶರವಣ. ಈ ಕುರಿತು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇನ್ನು ಈ ಕೃತ್ಯಕ್ಕೆ ಸಹಕರಿಸಿದ್ದ ಮತ್ತೊಬ್ಬ ಆರೋಪಿಗೂ ಶಿಕ್ಷೆ ಪ್ರಕಟವಾಗಿದೆ. ಸೆಂದಿಲ್‌ಕುಮಾರ್ ಶಿಕ್ಷೆಗೊಳಗಾದ ಮತ್ತೊಬ್ಬ ಅಪರಾಧಿ. ಈತನಿಗೆ ಕೋರ್ಟ್ 2 ವರ್ಷ ಜೈಲು ಮತ್ತು 10 ಸಾವಿರ ದಂಡ ವಿಧಿಸಿದೆ.

ಸೆಂದಿಲ್‌ಕುಮಾರ್, ಸಂತ್ರಸ್ತ ಅಪ್ರಾಪ್ತ ಬಾಲಕಿಯನ್ನು ಕಿಡ್ನಾಪ್ ಮಾಡಿ ಶರವಣ ಮನೆಗೆ ಕರೆದೊಯ್ದಿದ್ದ ಆರೋಪ ಸಾಬೀತಾದ ಹಿನ್ನೆಲೆ ಕೋರ್ಟ್ ಶಿಕ್ಷೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News