ಭಾರತದಲ್ಲಿ ನಡೆಯುವ ಹಾಕಿ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಭಾಗಿ

Update: 2017-12-07 06:27 GMT

ಭುವನೇಶ್ವರ, ಡಿ.7: ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಹಾಕಿ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಭಾಗವಹಿಸುವ ಕುರಿತಂತೆ ಇದ್ದ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ.

 ‘‘ಮೆಗಾ ಸ್ಪರ್ಧೆಗೆ ಪಾಕಿಸ್ತಾನ ಹಾಕಿ ತಂಡಕ್ಕೆ ಸ್ವಾಗತವಿದೆ. ಇಬ್ಬರು ಕೇಂದ್ರ ಸಚಿವರು ಈಗಾಗಲೇ ಪಾಕ್ ಟೂರ್ನಿಯಲ್ಲಿ ಭಾಗವಹಿಸುವ ಕುರಿತು ತಮ್ಮ ಒಪ್ಪಿಗೆ ನೀಡಿದ್ದಾರೆ. ಪಾಕ್ ಸಹಿತ 16 ತಂಡಗಳು ಭಾಗವಹಿಸಲಿರುವ ವಿಶ್ವಕಪ್ ಟೂರ್ನಿಯ ಆತಿಥ್ಯಕ್ಕೆ ಅನುಮತಿ ಕೋರಿ ಕ್ರೀಡಾ ಮತ್ತು ಯುವಜನ ವ್ಯವಹಾರ, ಗೃಹ ಹಾಗೂ ರಕ್ಷಣಾ ಸಚಿವಾಲಯಕ್ಕೆ ಪತ್ರ ಬರೆದಿದ್ದೆವು. ಇದರಲ್ಲಿ ಎರಡು ಸಚಿವಾಲಯದಿಂದ ಅನುಮತಿ ಲಭಿಸಿದ್ದು, ಇನ್ನೊಂದು ಸಚಿವಾಲಯದ ಅನುಮತಿ ಶೀಘ್ರವೇ ಲಭಿಸಲಿದೆ.ಟೂರ್ನಿಗೆ ಇನ್ನು ಕೆಲವೇ ಸಮಯ ಬಾಕಿ ಇರುವ ಹಿನ್ನೆಲೆಯಲ್ಲಿ ಅಗತ್ಯದ ಎಲ್ಲ ಪ್ರಕ್ರಿಯೆಯನ್ನು ಪೂರೈಸುವುದು ಪಾಕ್‌ಗೆ ಬಿಟ್ಟ ವಿಚಾರ’’ ಎಂದು ಹಾಕಿ ಇಂಡಿಯಾದ ಸಿಇಒ ಎಲೆನಾ ನೊರ್ಮನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News